*ಗೋಣಿಕೊಪ್ಪಲು, ನ. 29: ರಸ್ತೆ ಬದಿಯಲ್ಲಿ ಕಸ ಹಾಕಿದ ಬೇಕರಿ ಮಾಲೀಕರಿಗೆ 1000 ರೂಪಾಯಿ ದಂಡ ವಿಧಿಸಿ ಮುಂದಿನ ದಿನಗಳಲ್ಲಿ ಯಾವದೇ ಕಾರಣಕ್ಕೂ ರಸ್ತೆ ಬದಿಯಲ್ಲಿ ಕಸ ಹಾಕಬಾರದೆಂದು ಹಾತೂರು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಚ್ಚರಿಕೆ ನೀಡಿದರು.
ಹಾತೂರು ಗ್ರಾ.ಪಂ. ವ್ಯಾಪ್ತಿಗೆ ಬರುವ ಗೋಣಿಕೊಪ್ಪಲು ಸಮೀಪದ ಸೀಗೆ ತೋಡುವಿನಲ್ಲಿ ಮಲ್ನಾಡ್ ಕೇಕ್ ಪ್ಯಾರಡೈಸ್ ಬೇಕರಿ ಮಾಲೀಕರಿಗೆ ದಂಡ ವಿಧಿಸಿದ್ದಾರೆ.
ಪಿ.ಡಿ.ಒ. ತಿಮ್ಮಯ್ಯ ಅವರೊಂದಿಗೆ ಗ್ರಾ.ಪಂ ಉಪಾಧ್ಯಕ್ಷರಾದ ಗುಮ್ಮಟ್ಟೀರ ದರ್ಶನ್ ನಂಜಪ್ಪ, ವಾರ್ಡ್‍ನ ಸದಸ್ಯ ಕುಲ್ಲಚಂಡ ಚಿಣ್ಣಪ್ಪ ಹಾಜರಿದ್ದು, ರಸ್ತೆ ಬದಿಗಳಲ್ಲಿ ಕಸ ಹಾಕದಂತೆ ಜಾಗೃತಿ ಮೂಡಿಸಿದರು.