ಮಡಿಕೇರಿ, ನ. 29 : ಜಿಲ್ಲಾ ಮಟ್ಟದ ಗೃಹ ರಕ್ಷಕರ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭವು ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಿತು. ಸಮಾರೋಪದ ಅಂತಿಮ ಸುತ್ತಿನಲ್ಲಿ ಹಗ್ಗ ಜಗ್ಗಾಟ ಮತ್ತು ಓಟ ಸ್ಪರ್ಧೆ ನಡೆಯಿತು. ಉಪವಿಭಾಗಾಧಿಕಾರಿ ಟಿ. ಜವರೇಗೌಡ ಅವರು ಕ್ರೀಡಾಕೂಟದಲ್ಲಿನ ಉತ್ಸಾಹದಂತೆ ವೃತ್ತಿಯಲ್ಲಿಯೂ ಲವಲವಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಮಾರೋಪ ವೇಳೆ ಸಲಹೆ ನೀಡಿದರು.ಜಿಲ್ಲಾ ಗೃಹ ರಕ್ಷಕ ದಳದ ಸಮಾದೇಷ್ಟರಾದ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಮಾತನಾಡಿ, ಸೋಮವಾರಪೇಟೆ ಮತ್ತು ಇತರೆ ಕಡೆಗಳಲ್ಲಿ ಗೃಹ ರಕ್ಷಕ ದಳಕ್ಕೆ ಕಚೇರಿ ಅಗತ್ಯವಿದ್ದು, ಸಹಕಾರಕ್ಕೆ ಉಪ ವಿಭಾಗಾಧಿಕಾರಿಯವರಲ್ಲಿ ಮನವಿ ಮಾಡಿದರು.(ಮೊದಲ ಪುಟದಿಂದ) ಗೃಹ ರಕ್ಷಕ ದಳದ 100ಕ್ಕೂ ಹೆಚ್ಚು ಜನರು ಶ್ರದ್ಧೆ ಹಾಗೂ ಶಿಸ್ತಿನಿಂದ ಪೊಲೀಸ್ ಇಲಾಖೆಯಲ್ಲಿನ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡಿಎಆರ್ ವಿಭಾಗದ ಪೊಲೀಸ್ ನಿರೀಕ್ಷಕ ಎಸ್. ರಾಚಯ್ಯ ಮಾತನಾಡಿ, ಗೃಹರಕ್ಷಕ ದಳದವರು ಒಂದೆಡೆ ಸೇರಲು ಕ್ರೀಡಾಕೂಟ ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪೊಲೀಸ್ ನಿರೀಕ್ಷಕ ದಿವಾಕರ ಮಾತನಾಡಿ, ಕ್ರೀಡಾಕೂಟದಲ್ಲಿ ತೊಡಗಿಸಿಕೊಳ್ಳುವದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು. ತೀರ್ಪುಗಾರರಾದ ಹರೀಶ್ ಸರಳಾಯ, ಕೃಷ್ಣ, ಲೋಕೇಶ್ ಇತರರು ಇದ್ದರು.