ಸುಂಟಿಕೊಪ್ಪ, ನ. 27: ಕಿರಂಗದೂರು, ಐಗೂರು ಜಂಕ್ಷನ್‍ನಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದೆಂದು ಕಿರಗಂದೂರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಐಗೂರು ಗ್ರಾಮ ಪಂಚಾಯಿತಿ ಕಾರ್ಯಾಲಯದ ಅನತಿ ದೂರದಲ್ಲಿ ಈ ಹಿಂದೆ ವೈನ್‍ಶಾಪ್ ತೆರೆದ ನಂತರ ಹಲವಾರು ಗಲಾಟೆ ನಡೆದು ಊರಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೋಮು ಸೌಹದರ್Àತೆಗೂ ಧಕ್ಕೆ ಬಂದು ಒಂದೂವರೆ ವರ್ಷಗಳ ಕಾಲ ಪೊಲೀಸರನ್ನು ನಿಯೋಜಿಸಲಾಗಿತ್ತು.

ಇದೀಗ ಐಗೂರು ಗಡಿಭಾಗದ ಕಿರಗಂದೂರು ಗ್ರಾಮ ಪಂಚಾಯಿತಿಗೆ ಸೇರಿದ ಜನನಿಬಿಡ ಪ್ರದೇಶದಲ್ಲಿ ಮದ್ಯದಂಗಡಿ ತೆರೆಯಲು ಹುನ್ನಾರ ನಡೆಯುತ್ತಿದೆ. ಕೆಲ ಜನಪ್ರತಿನಿಧಿಗಳು ಇದಕ್ಕೆ ಸಾಥ್ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕಿರಂಗದೂರು ಗ್ರಾಮ ಪಂಚಾಯಿತಿಗೆ ಸೇರಿದ ಐಗೂರು ಗಡಿ ಒತ್ತಿನಲ್ಲಿ ಮದ್ಯದಂಗಡಿ ತೆರೆದರೆ ಉಗ್ರ ಹೋರಾಟ ನಡೆಸಲಾಗುವದು ಎಂದು ಕಿರಗಂದೂರು ಗ್ರಾ.ಪಂ. ಸದಸ್ಯ ಗಣೇಶ್ ನೇತೃತ್ವದಲ್ಲಿ ಗ್ರಾಮಸ್ಥರಾದ ಕೆ.ಜಿ. ಸತೀಶ, ಕೆ.ಕೆ. ಚಂದ್ರ, ಬಸವರಾಜು, ಪಾಪಣ್ಣ, ಉತ್ತಪ್ಪ, ಉಮೇಶ, ಮುರುಗ, ರಾಮ, ಕೃಷ್ಣಪ್ಪ, ಆಟೋ ವಿಶ್ವ, ಪನ್ನೀರ್, ರಾಜೇಂದ್ರ, ಆನಂದ, ಬಾಲ ನಾಗರಾಜು, ಕೃಷ್ಣಪ್ಪ, ಪ್ರಕಾಶ್, ಮಣಿ, ಸಂತೋಷ್ ಸೇರಿದಂತೆ ಗ್ರಾಮಸ್ಥರು ತಿಳಿಸಿದ್ದಾರೆ.