ಮಡಿಕೇರಿ ನ.27 : ಕಾಡು ಬಿಟ್ಟು ನಾಡಿಗೆ ಬಂದು ಹೆದ್ದಾರಿ ಬದಿ ಪ್ರತ್ಯಕ್ಷವಾದ ಹೆಬ್ಬಾವೊಂದನ್ನು ಸಂಪಾಜೆಯ ಅರೆಕಲ್ಲು ಗ್ರಾಮದಲ್ಲಿ ರಕ್ಷಿಸಲಾಗಿದೆ. ಸಾರ್ವಜನಿಕರು ಮಾಹಿತಿ ನೀಡಿದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಕಲ್ಲುಗುಂಡಿಯ ಶರತ್ ಕಿಲಾರ್, ಹೆಬ್ಬಾವನ್ನು ಹಿಡಿದು ಅರಣ್ಯ ಇಲಾಖೆಗೆ ತಿಳಿಸಿದರು. ನಂತರ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಸುಮಾರು 14 ಅಡಿ ಉದ್ದವಿದ್ದ ಹೆಬ್ಬಾವನ್ನು ದೇವರಕೊಲ್ಲಿ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಿದರು.