ಗೋಣಿಕೊಪ್ಪ ವರದಿ, ನ. 28 ; ಉಮಾಮಹೇಶ್ವರಿ ದೇವಸ್ಥಾನದಲ್ಲಿ ಸುಬ್ರಮಣ್ಯ ಷಷ್ಠಿ ಪ್ರಯುಕ್ತ ಇಂದಿನಿಂದ ಡಿಸೆಂಬರ್ 4 ರವರೆಗೆ ವಿವಿಧ ಪೂಜಾ ಕಾರ್ಯ ನೆರವೇರಲಿವೆ.

ಬೆಳಿಗ್ಗೆ 7ಕ್ಕೆ ಗಣಪತಿ ಹೋಮ, ಸಂಜೆ 7 ಕ್ಕೆ ದೀಪಾರಾಧನೆ, 8 ಕ್ಕೆ ಮಹಾ ಮಂಗಳಾರತಿ, ತಾ. 30 ರಂದು ಮುಂಜಾನೆ 5 ಕ್ಕೆ ಇರುಬೊಳಕ್, ಉತ್ಸವಮೂರ್ತಿ ಪ್ರದಕ್ಷಿಣೆ, ಮ. 12 ಕ್ಕೆ ಮಹಾ ಮಂಗಳಾರತಿ, ಸಂಜೆ 7 ಕ್ಕೆ ದೀಪಾರಾಧನೆ, ಉತ್ಸವಮೂರ್ತಿ ಪ್ರದಕ್ಷಿಣೆ, 8 ಕ್ಕೆ ಮಹಾ ಮಂಗಳಾರತಿ ನಡೆಯಲಿದೆ.

ಡಿ. 1 ರಂದು ಮುಂಜಾನೆ 5 ಕ್ಕೆ ಉತ್ಸವಮೂರ್ತಿ ಪ್ರದಕ್ಷಿಣೆ, ಮ. 12 ಕ್ಕೆ ಮಹಾ ಮಂಗಳಾರತಿ, ಸಂಜೆ 7 ಕ್ಕೆ ಉತ್ಸವಮೂರ್ತಿ ಪ್ರದಕ್ಷಿಣೆ, ದೀಪಾರಾಧನೆ, 8 ಕ್ಕೆ ಮಹಾ ಮಂಗಳಾರತಿ, 2 ರಂದು ಚಂಪಾಷಷ್ಠಿ ಮುಂಜಾನೆ 5 ಕ್ಕೆ ಇರುಬೊಳಕ್, ಉತ್ಸವಮೂರ್ತಿ ಪ್ರದಕ್ಷಿಣೆ, ಎಳನೀರು, ಆಳುರೂಪ, ಹರಕೆ, ತಲೆಮುಡಿ, ತುಲಾಭಾರ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಸೇವೆ, ಮ. 1 ಕ್ಕೆ ಅನ್ನಸಂತರ್ಪಣೆ, ಸಂಜೆ 7 ಕ್ಕೆ ದೇವರ ನೃತ್ಯ, ಸಾಮೂಹಿಕ ವಸಂತಪೂಜೆ, ಮಹಾ ಮಂಗಳಾರತಿ ನಡೆಯಲಿದೆ.

ಡಿ. 3 ರಂದು ಬೆ. 7 ಕ್ಕೆ ಭಕ್ತಾಧಿಗಳಿಂದ ಸೇವೆ, ತಲೆಮುಡಿ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಮ. 12 ಕ್ಕೆ ಮಹಾ ಮಂಗಳಾರತಿ, ಸಂಜೆ 7 ಕ್ಕೆ ಅವಭೃತ ಸ್ನಾನ, ಪ್ರದಕ್ಷಿಣೆ, ಮಹಾ ಮಂಗಳಾರತಿ, 4 ರಂದು ಮಧ್ಯಾಹ್ನ ನಂತರ ಪೂಜಾ ಕಾರ್ಯ ನಡೆಯಲಿದೆ. ಷಷ್ಠಿ ಸಮರಾದನೆಗೆ ಅನ್ನ ಸಂತರ್ಪಣೆ ಪ್ರಯುಕ್ತ ತರಕಾರಿ, ಅಕ್ಕಿ, ಬೆಲ್ಲ, ಎಳನೀರು, ಎಣ್ಣೆ, ವಗೈರೆಗಳನ್ನು ಸ್ವೀಕರಿಸಲಾಗುವದು ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.