ಮಡಿಕೇರಿ, ನ. 28: ನಗರದ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಡಿ. 2 ರಂದು ಉತ್ಸವ ಸಮಿತಿ ವತಿಯಿಂದ ಶ್ರೀಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಲಿದೆ ಎಂದು ಶ್ರೀ ಮುತ್ತಪ್ಪ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಕೆ. ಸುಧೀರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಷಂಪ್ರತಿಯಂತೆ ಈ ವರ್ಷವೂ ಸುಬ್ರಹ್ಮಣ್ಯ ಸ್ವಾಮಿಯ ಷಷ್ಠಿಯಂದು ಮುತ್ತಪ್ಪ ದೇವರ ವೆಳ್ಳಾಟಂ, ಪಂಚಾಮೃತ ಅಭಿಷೇಕ ಸೇವೆ, ಕ್ಷೀರಾಭಿಷೇಕ, ಅಪ್ಪಂ ಸೇವೆ, ಪಂಚಕಜ್ಜಾಯ ಸೇವೆ, ಹಣ್ಣುಕಾಯಿ ಪೂಜೆ, ಪುಷ್ಪಾರ್ಚನೆ, ಮಂಗಳಾರತಿ ಸೇರಿದಂತೆ ಇತ್ಯಾದಿ ಸೇವೆಗಳು ನೆರವೇರಲಿವೆ. ಅಂದು ಮಧ್ಯಾಹ್ನ 12 ಗಂಟೆಗೆ ಶ್ರೀ ಸುಬ್ರಹ್ಮಣ್ಯ ದೇವರ ಶ್ರೀಭೂತ ಬಲಿ, 12.30ಕ್ಕೆ ಮಹಾಮಂಗಳಾರತಿ, ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7 ಗಂಟೆಗೆ ಭಜನೆ, ಮಹಾಪೂಜೆ ನಂತರ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ತಿಳಿಸಿದರು. ನೆರವಿಗೆ ಮನವಿ- ಷಷ್ಠಿ ಮಹೋತ್ಸವಕ್ಕೆ ಆರ್ಥಿಕ ನೆರವು, ಅನ್ನದಾನಕ್ಕೆ ಬೇಕಾದ ಸಾಮಗ್ರಿ ನೀಡುವವರು ಮೊಬೈಲ್ ಸಂಖ್ಯೆ 9448406534, 9448145554, 9448135592, 9448184779, 9449402045 ಸಂಪರ್ಕಿಸ ಬಹುದೆಂದು ಸುಧೀರ್ ತಿಳಿಸಿದರು.
ವಿಶೇಷ ಪೂಜೆ: ಕೇರಳದ ಪಂದಳಂನ ಶ್ರೀ ಮಾಂಗೂರು ಪಾರ್ಥಸಾರಥಿ ಸ್ಕಂದನ್ ತಂತ್ರಿಗಳ ನೇತೃತ್ವದಲ್ಲಿ ಪುನರ್ ಪ್ರತಿಷ್ಠಾಪನೆ ಗೊಂಡಿರುವ ಈ ಕ್ಷೇತ್ರದಲ್ಲಿ ಪ್ರತಿನಿತ್ಯ ಬೆಳಿಗ್ಗೆ 7 ಗಂಟೆಯಿಂದ ವಿಶೇಷ ಪೂಜೆ, ಅಭಿಷೇಕ ಪೂಜೆಗಳು, ನೈವೇದ್ಯ ಸಮರ್ಪಣೆ, ನೀರಾಂಜನ ಸೇವೆಗಳು ನಡೆಯುತ್ತವೆ. ಪ್ರತಿ ಶುಕ್ರವಾರ ಶಕ್ತಿ ಗಣಪತಿ ಹಾಗೂ ಪಾರ್ವತಿ ದೇವಿಗೆ ಕಜ್ಜಾಯ, ಮಂಗಳವಾರ ಪಂಚಾಮೃತ ಸಮರ್ಪಣೆ, ಪ್ರತಿ ತಿಂಗಳ ಷಷ್ಠಿಯಂದು ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ಸೇರಿದಂತೆ ಹಲ ಪೂಜಾ ಕೈಂಕರ್ಯ ನಡೆಯುತ್ತದೆಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ದೇವಾಲಯದ ಧರ್ಮದರ್ಶಿ ಗಿರೀಶ್, ಮುತ್ತಪ್ಪ ದೇವಾಲಯ ಉತ್ಸವ ಸಮಿತಿ ಅಧ್ಯಕ್ಷ ಎಸ್. ಸುರೇಶ್, ಖಜಾಂಚಿ ಉಣ್ಣಿಕೃಷ್ಣ, ಮುತ್ತಪ್ಪ ದೇವಾಲಯ ಮಹಿಳಾ ವೇದಿಕೆಯ ಖಜಾಂಚಿ ಶೋಭಾ ಪೆÇನ್ನಪ್ಪ ಹಾಗೂ ಸದಸ್ಯೆ ಕನ್ನಂಡ ಕವಿತಾ ಉಪಸ್ಥಿತರಿದ್ದರು.