ಸಿದ್ದಾಪುರ, ನ. 28: ನೆಲ್ಲಿಹುದಿಕೇರಿ ದಾರುನ್ನಜಾತ್ ಸುನ್ನಿ ಎಜುಕೇಶನಲ್ ಅಕಾಡೆಮಿ ನೇತೃತ್ವದಲ್ಲಿ ಎಸ್.ವೈ.ಎಸ್.ಎಸ್.ಎಫ್. ಹಾಗೂ ಸುನ್ನಿ ಸಂಘ ಕುಟುಂಬದ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ ಈದ್ ಸಂದೇಶ ಜಾಥಾ ನಡೆಸಿದರು.

ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಮದರಸಾ ವಿದ್ಯಾರ್ಥಿಗಳ ದಫ್ ಪ್ರದರ್ಶನ ಗಮನ ಸೆಳೆಯಿತು

ಈ ಸಂದರ್ಭ ಪ್ರಮುಖರಾದ ಸೈಯದ್ ಮುತ್ತುಮೋನ್ ತಂಗಳ್ , ಬಾಅಲವಿ ತಂಗಳ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಸ್ಮಾನ್, ಪ್ರಧಾನ ಕಾರ್ಯದರ್ಶಿ ಕೆ.ಎಂ. ಸಯ್ಯದ್ ಬಾವ, ಪ್ರಮುಖರಾದ ವಿಪಿಎಸ್ ತಂಗಳ್ ಕುಟ್ಟಿ, ಅಬುಬಕ್ಕರ್, ಅಬ್ದುಲ್ಲಾ, ಹಂಸ, ಹಾರಿಸ್ ಸಖಾಫಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.