ಕೂಡಿಗೆ, ನ. 28: ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ವತಿಯಿಂದ ಲಕ್ಷದೀಪೋತ್ಸವ ಕಾರ್ಯಕ್ರಮ ನಡೆಯಿತು. ದೇವರಿಗೆ ಬೆಳಿಗ್ಗೆಯಿಂದಲೂ ವಿಶೇಷ ಅಲಂಕಾರ ಪೂಜೆ, ಸಂಜೆ 8 ಗಂಟೆಗೆ ದೀಪಗಳ ಅಲಂಕಾರ ಮಹಾಪೂಜೆ, ಮಹಾಮಂಗಳಾರತಿ ಬಳಿಕ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ದೀಪೋತ್ಸವದ ಉದ್ಘಾಟನೆಯನ್ನು ಟಾಟಾ ವಕ್ರ್ಸ್‍ನ ಹಿರಿಯ ವ್ಯವಸ್ಥಾಪಕ ವಿವೇಕ್ ಅಯ್ಯಣ್ಣ ನೆರವೇರಿಸಿದರು. ಪೂಜಾ ವಿಧಿ ವಿಧಾನವನ್ನು ದೇವಾಲಯದ ಮುಖ್ಯ ಅರ್ಚಕ ನವೀನ ಭಟ್ ನೆರವೇರಿಸಿದರು.