ಕೂಡಿಗೆ: ಯುವಕರು ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ತೊಡಗುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಸಾಹಿತಿಗಳಾದ ಕಣಿವೆಯ ಭಾರದ್ವಾಜ್ ಕೆ. ಆನಂದತೀರ್ಥ ಹೇಳಿದರು.
ಕೂಡಿಗೆ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ನಡೆದ 2ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಟೋ ಚಾಲಕರು ದೇಶಾಭಿಮಾನವನ್ನು ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮವಾದ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಅಂತಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಲ್ಲಿ ಸ್ನೇಹ ಸಾಮರಸ್ಯವನ್ನು ಒಗ್ಗಟ್ಟನ್ನು ಮೈಗೂಡಿಸಿಕೊಂಡಂತಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಪ್ರೊಬೇಷನರಿ ಎಸ್ಐ ವಿಜಯಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ಐ ಸ್ವಾಮಿ, ಕೂಡಿಗೆ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ ಕೆ.ಕೆ. ನಾಗರಾಜ ಶೆಟ್ಟಿ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯೆಷಾ, ಶ್ರೀಶಕ್ತಿ ವೃದ್ಧಾಶ್ರಮದ ಮೇಲ್ವಿಚಾರಕ ಚಂದ್ರು, ಕೂಡಿಗೆಯ ಕಿಶೋರ ಕೇಂದ್ರದ ವ್ಯವಸ್ಥಾಪಕಿ ಉಮಾಪ್ರಭಾಕರ್, ಜ್ಞಾನೋದಯ ಶಾಲೆಯ ಮೇಲ್ವಿಚಾರಕ ಮುದ್ದಪ್ಪ, ಕೂಡುಮಂಗಳೂರು ಗ್ರಾ.ಪಂ. ಕಾರ್ಯದರ್ಶಿ ಮುತ್ತಪ್ಪ, ಪ್ರಾಥಮಿಕ ಶಾಲೆ ಶಿಕ್ಷಕ ನಂದಕುಮಾರ್ ಮತ್ತಿತರರು ಇದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಉದ್ಬವ ಸುಬ್ರಹ್ಮಣ್ಯ ಸ್ವಾಮಿ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೆ.ಕೆ. ರವಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಸಾಹಿತಿಗಳಾದ ಕಣಿವೆಯ ಭಾರದ್ವಾಜ್ ಕೆ. ಆನಂದತೀರ್ಥ ಅವರನ್ನು ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ರಾಜ್ಯೋತ್ಸವದ ಅಂಗವಾಗಿ ಆಟೋ ಚಾಲಕರು, ಮಾಲೀಕರು ಹಾಗೂ ಸಾರ್ವಜನಿಕರಿಗೆ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಸುಮಾರು 50 ಕ್ಕು ಹೆಚ್ಚು ಆಟೋ ಚಾಲಕರು ಮತ್ತು ಸಾರ್ವಜನಿಕರು ರಕ್ತದಾನ ಮಾಡಿದರು.
ಕೂಡಿಗೆಯಲ್ಲಿರುವ ಶಕ್ತಿ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಬಟ್ಟೆ ವಿತರಣೆ ಮತ್ತು ಅನ್ನದಾನ, ಸಾರ್ವಜನಿಕರಿಗೆ ಅನ್ನಸಂತರ್ಪಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಮಡಿಕೇರಿ: ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆಯಲ್ಲಿ ಕನ್ನಡ ಸಂಘದ ವತಿಯಿಂದ ಆಯೋಜಿತ ಕನ್ನಡ ರಾಜ್ಯೋತ್ಸವದ ಅಂಗವಾಗಿನ ಜಾನಪದ ಉತ್ಸವ ಮಂಥನದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ವಿಭಿನ್ನ ಸ್ಪರ್ಧೆಗಳ ವಿಜೇತರ ವಿವರ ಇಂತಿದೆ.
ಕೈ ಕುಸ್ತಿ: ಪ್ರಥಮ ಬಹುಮಾನ- ವಿದ್ಯಾರಾಣಿ ಮತ್ತು ಯೋಗರಾಜ್. ದ್ವಿತೀಯ ಬಹುಮಾನ ದಿಶಾ ಹಾಗೂ ಶಶಾಂಕ್ ರೈ ಕೆ.ಬಿ., ಚರ್ಚಾ ಸ್ಪರ್ಧೆ: ಪರ: ಸುಚಿತ ಲೋಕೇಶ್ ಮತ್ತು ಗಿರಿಜಾಮಣಿ, ವಿರೋಧ: ಶಿವಮೂರ್ತಿ ಮತ್ತು ಉತ್ತಮ್ ಹಲ್ಲೂರ್, ರಸಪ್ರಶ್ನೆ: ಪ್ರಥಮ: ಆಕಾಶ್ ನಿಂಬರ್ಗಕರ್ ತಂಡ, ದ್ವಿತೀಯ: ರಾಕೇಶ್ ಗೌಡ ತಂಡ, ಕವಲುದಾರಿ: ಪ್ರಥಮ: ಪ್ರಣವ್ ಕುಮಾರ್ ತಂಡ, ಲಗೋರಿ: ಕಟ್ಟಿಮನಿ ಮತ್ತು ತಂಡ (ವಿದ್ಯಾರ್ಥಿ ವಿಭಾಗ), ಪ್ರೀತಿ ಹೆಚ್.ಎನ್. ಮತ್ತು ತಂಡ (ವಿದ್ಯಾರ್ಥಿನಿಯರು), ಚೌಕಭಾರ: ಪ್ರಥಮ: ಮುಕ್ತ ಮತ್ತು ಲಿಖಿತ ಎ.ಜಿ., ದ್ವಿತೀಯ: ಶಿಲ್ಪ ಮತ್ತು ಎ.ಜಿ., ಸುಳ್ಳು ಹೇಳುವ ಸ್ಪರ್ಧೆ: ಪ್ರಥಮ: ಗುರುಕಿರಣ ಮತ್ತು ದೀಕ್ಷಿತ್.ಕೆ.ಪಿ., ದ್ವಿತೀಯ: ಜಾನ್ವಿ, ಬಳಸು ಕನ್ನಡ-ಬೆಳೆಸು ಕನ್ನಡ ಸ್ಪರ್ಧೆ: ಪ್ರಥಮ: ನವೀನ್ ಮ್ಯಾಥ್ಯೂ ಜಾರ್ಜ್ ಹಾಗೂ ಅಭಿಷೇಕ್ ಕುಮಾರ್, ದ್ವಿತೀಯ: ಅಶ್ವಿನಿ, ಓ ಸಂಗಾತಿ...ಮುನಿಸೇತಕೆ ಸ್ಪರ್ಧೆ: ಪ್ರಥಮ: ಪಾರ್ವತಿ, ದ್ವಿತೀಯ: ಸುಚಿತ ಲೋಕೇಶ್ ಮತ್ತು ಆಕಾಶ್ ನಿಂಬರ್ಕರ್, ಚಿತ್ರಕಲೆ: ಪ್ರಥಮ: ಅನನ್ಯ ಜೆ.ಆರ್., ದ್ವಿತೀಯ: ನಿಹಾರಿಕ, ರಂಗೋಲಿ: ಪ್ರಥಮ - ಪವಿತ್ರ.ಎಸ್ ಮತ್ತು ತಂಡ, ದ್ವಿತೀಯ - ಜ್ಞಾನೇಶ್ವರಿ ಮತ್ತು ತಂಡ.ಸಿದ್ದಾಪುರ: ಮಾಲ್ದಾರೆಯ ಜನಪರ ಕ್ರೀಡಾ ಹಾಗೂ ಕಲಾ ಯೋಜನಾ ಸಂಘದ ವತಿಯಿಂದ ಮಾಲ್ದಾರೆ ಗುಡ್ಲೂರಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಗುಡ್ಲೂರಿನ ಗಾಂಧಿ ಸ್ಮಾರಕ ಸಮುದಾಯ ಭವನದಲ್ಲಿ ನಾಡ ಧ್ವಜಾರೋಹಣದೊಂದಿಗೆ 64ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಾ ಕನ್ನಡಿಗ ಟೋಮಿ ಥಾಮಸ್ ಕಾರ್ಯಕ್ರಮದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷೆ ರಾಣಿ, ಗ್ರಾ.ಪಂ. ಸದಸ್ಯರುಗಳಾದ ರಘು ಕರುಂಬಯ್ಯ, ಸತೀಶ್, ರಾಮಚಂದ್ರ, ಆನಂದ, ಜೀತು ಹಾಗೂ ಜನಪರ ಸಂಘಟನೆ ಅಧ್ಯಕ್ಷ ಆಂಟೋನಿ, ಪದಾಧಿಕಾರಿಗಳಾದ ಅಸೀಸ್, ಹರಿಪ್ರಸಾದ್, ವಿನಿಲ್, ಪ್ರವೀಣ್ ಇತರರು ಹಾಜರಿದ್ದರು. ಕಲಾವಿದ ಭಾವ ಮಾಲ್ದಾರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಟೋಮಿ ಥಾಮಸ್ ಹಾಗೂ ಚಂಡೆ ಕಲಾವಿದ ಶಾಜಿ ಅವರನ್ನು ಸನ್ಮಾನಿಸಲಾಯಿತು.