ಬೆಂಗಳೂರು, ನ. 26: ಹಾಕಿ ಕರ್ನಾಟಕ ವತಿಯಿಂದ ಬೆಂಗಳೂರಿನಲ್ಲಿ ಫೀ.ಮಾ. ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಬ್ ಜೂನಿಯರ್ ಬಾಲಕಿಯರ ವಿಭಾಗದ ಹಾಕಿ ಪಂದ್ಯಾಟದಲ್ಲಿ ಕೊಡಗು ಜಯ ಗಳಿಸಿದೆ. ಕೊಡಗು ತಂಡ ಧಾರವಾಡವನ್ನು 5-0 ಗೋಲುಗಳಿಂದ ಸೋಲಿಸಿ ಮುನ್ನಡೆ ಪಡೆಯಿತು. ತಂಡದ ಪರ ದೇಚಮ್ಮ (3), ಜೀವಿತಾ (1) ಹಾಗೂ ಸುಫಾನ ಗೋಲು ಬಾರಿಸಿದರು. ಈ ಪಂದ್ಯಾವಳಿಯ ಮೂಲಕ ಉತ್ತಮ ಆಟಗಾರ್ತಿಯರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗುತ್ತಿದ್ದು, ಇದೊಂದು ಪ್ರಮುಖ ಪಂದ್ಯಾವಳಿಯಾಗಿದೆ ಎಂದು ಹಾಕಿ ಇಂಡಿಯಾದ ತರಬೇತುದಾರರಾಗಿರುವ ಬಿ.ಜೆ. ಕಾರ್ಯಪ್ಪ ತಿಳಿಸಿದ್ದಾರೆ.