ಕಣಿವೆ, ನ. 26: : ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದ ಕಾವೇರಪ್ಪ ಎಂಬವರ ಜಮೀನಿನಲ್ಲಿ ಹೆಬ್ಬಾವೊಂದು ಪತ್ತೆಯಾಗಿದ್ದು ಅದನ್ನು ಹಿಡಿದು ಆನೆಕಾಡು ಅರಣ್ಯದೊಳಗೆ ಬಿಡಲಾಯಿತು. ಕಾರ್ಮಿಕರು ಎಂದಿನಂತೆ ಜಮೀನಿನಲ್ಲಿ ಕೆಲಸಕ್ಕೆ ತೆರಳಿದ್ದ ಸಂದರ್ಭ ಬೃಹತ್ ಗಾತ್ರ ಮತ್ತು ಉದ್ದದ ಹೆಬ್ಬಾವು ಕಂಡು ಹೌಹಾರಿದ್ದಾರೆ. ತಕ್ಷಣವೇ ಆನೆಕಾಡು ರೆಸಾರ್ಟ್‍ನಲ್ಲಿದ್ದ ಉರಗ ರಕ್ಷಕ ಪುರುಷೋತ್ತಮ್ ಅವರನ್ನು ಕರೆಸಿ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಡಲಾಗಿದೆ. ಈ ಹಾವು 13 ಅಡಿ ಉದ್ದವಿತ್ತು.