ಮಡಿಕೇರಿ, ನ. 26: ಈ ವರ್ಷ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಕಾವೇರಿ ನದಿ ಪ್ರವಾಹಕ್ಕೆ ತುತ್ತಾಗಿ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು, ಗುಹ್ಯ ಗ್ರಾಮ ಸಂಪೂರ್ಣ ಜಲಾವೃತವಾಗಿತ್ತು.

ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರವಾಹಕ್ಕೆ ತುತ್ತಾಗಿ ನೂರಕ್ಕೂ ಹೆಚ್ಚು ಮನೆಗಳು ನೆಲಸಮವಾಗಿತ್ತು ಹಾಗೂ 80ಕ್ಕೂ ಹೆಚ್ಚು ಮನೆಗಳು ವಾಸಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿದೆ. ಪ್ರವಾಹಕ್ಕೆ ತುತ್ತಾದ ಕರಡಿಗೋಡು 27, ಗುಹ್ಯ 24 ಹಾಗೂ ಪಾಲಿಪೆಟ್ಟ ಗ್ರಾಮದ 2 ಸಂತ್ರಸ್ತ ಕುಟುಂಬಗಳು ಸೇರಿ ಒಟ್ಟು 63 ಕುಟುಂಬಗಳಿಗೆ ಸರ್ಕಾರದ ರೂ. 10 ಸಾವಿರ ತಾತ್ಕಾಲಿಕ ಪರಿಹಾರ ಇದುವರೆಗೆ ಲಭಿಸದೇ ಸಂತ್ರಸ್ತರು ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ.

ಮನೆ ಕಳೆದುಕೊಂಡ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತ್ರಸ್ತರಲ್ಲಿ ಕೆಲವರು ಸಂಘಟನೆಯೊಂದು ನಿರ್ಮಿಸಿಕೊಟ್ಟ ಶೆಡ್ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇನ್ನೂ ಕೆಲವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಸರ್ಕಾರದ ತಾತ್ಕಾಲಿಕ ಪರಿಹಾರ ರೂ. 10 ಸಾವಿರ ಸಿಕ್ಕಿದರೆ ಮನೆಯ ಬಾಡಿಗೆ ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಆದೇಶ ಪಾಲನೆಗೆ ನಕಾರ: ಪ್ರವಾಹದಲ್ಲಿ ಮನೆ, ಸಾಮಗ್ರಿಗಳನ್ನು ಕಳೆದುಕೊಂಡವರಿಗೆ ಸರ್ಕಾರವು ತಾತ್ಕಾಲಿಕ ಪರಿಹಾರ ರೂಪದಲ್ಲಿ ರೂ. 10 ಸಾವಿರ ನೀಡುವದಾಗಿ ಘೋಷಿಸಿದ್ದರು. ಕಂದಾಯ ಅಧಿಕಾರಿಗಳು ಮನೆ, ಮನೆ ತೆರಳಿ ಸಮೀಕ್ಷೆ ನಡೆಸಿದ್ದು, ಮೊದಲ ಹಂತದ ಸಮೀಕ್ಷೆಯಲ್ಲಿ 63 ಕುಟುಂಬಗಳಿಗೆ ಇದುವರೆಗೆ ತಾತ್ಕಾಲಿಕ ಪರಿಹಾರವೇ ಸಿಕ್ಕಿಲ್ಲ.

ಜಿಲ್ಲಾಧಿಕಾರಿಯವರು ಈ ಹಿಂದೆ ಪರಿಹಾರ ಕೇಂದ್ರದಲ್ಲಿ ನೋಂದಣಿಯಾಗಿದಿದ್ದರೂ ಸಹಾ ಮನೆ ಸಾಮಗ್ರಿಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ತಾತ್ಕಾಲಿಕ ಹತ್ತು ಸಾವಿರ ಪರಿಹಾರ ನೀಡುವದಾಗಿ ಘೋಷಿಸಿದ್ದರು.

ನಿರಾಶ್ರಿತರ ಹೋರಾಟ ಸಮಿತಿ ವತಿಯಿಂದ ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸಬೇಕೆಂದು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ‘ಚೆಕ್ ಸಹಿ ಆಗಿಲ್ಲ’ ಕಂದಾಯ ಇಲಾಖೆ ಅಧಿಕಾರಿಗಳು: ಪ್ರವಾಹಕ್ಕೆ ತುತ್ತಾಗಿ ಸಂತ್ರಸ್ತರು ತಮ್ಮ ಮನೆ, ಸಾಮಗ್ರಿಗಳನ್ನು ಕಳೆದುಕೊಂಡು ನೂರು ದಿನಗಳೇ ಕಳೆದಿದೆ. ಸಂತ್ರಸ್ತರಿಗೆ ಸಿಗಬೇಕಾದ ತಾತ್ಕಾಲಿಕ ಪರಿಹಾರ ಹತ್ತು ಸಾವಿರ ರೂಪಾಯಿ ಬಗ್ಗೆ ಕಂದಾಯ ಇಲಾಖೆಯಲ್ಲಿ ವಿಚಾರಿಸಿದರೆ ಚೆಕ್‍ಗೆ ಸಹಿ ಆಗಿಲ್ಲ ಎನ್ನುತ್ತಿದ್ದಾರೆ ಎಂದು ಕಂದಾಯ ಇಲಾಖಾ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಸಂತ್ರಸ್ತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದರ ಕುರಿತು ಜಿಲ್ಲಾಧಿಕಾರಿಗಳು ಕೂಡಲೇ ಗಮನಹರಿಸಿಬೇಕಾಗಿದೆ.ತಹಶೀಲ್ದಾರರಿಗೆ ಸೂಚನೆ ನೀಡಿದ್ದರು.

ಆದರೆ ಜಿಲ್ಲಾಧಿಕಾರಿಯವರು, ತಹಶೀಲ್ದಾರರಿಗೆ ಸೂಚನೆ ನೀಡಿ ಒಂದೂವರೆ ತಿಂಗಳು ಕಳೆದರು ಕೂಡ ಇದುವರೆಗೆ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರವೇ ದೊರಕಿಲ್ಲ.

ಮತ್ಯಾವಾಗ ಶಾಶ್ವತ ಪರಿಹಾರ?: ಪ್ರವಾಹ ಬಂದು ನೂರು ದಿನಗಳೇ ಕಳೆದಿದೆ. ಆದರೆ, ಇದೀಗ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಶಾಶ್ವತ ಸೂರು ಹೋಗಿ, ತಾತ್ಕಾಲಿಕ ಪರಿಹಾರವೇ ಸಿಕ್ಕಿಲ್ಲ. ಬಾಡಿಗೆ ಮನೆಯಲ್ಲಿ ವಾಸವಿರುವ ಸಂತ್ರಸ್ತರು ಬಾಡಿಗೆ ಹಣ ಪಾವತಿ ಮಾಡಲಾಗದೇ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ.

ಜನಪ್ರತಿನಿಧಿಗಳ ಮೌನ...!: ಆಗಸ್ಟ್ ತಿಂಗಳಲ್ಲಿ ಪ್ರವಾಹಕ್ಕೆ ತುತ್ತಾಗಿ ಹಲವಾರು ಜನರು ತಮ್ಮ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ.

ಬಾಡಿಗೆ ಮನೆ, ತಾತ್ಕಾಲಿಕ ಶೆಡ್ ಹಾಗೂ ಇನ್ನೂ ಕೆಲ ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸಿಕೊಡಲು ಹಾಗೂ ಸಂತ್ರಸ್ತರ ಕುರಿತಾಗಿ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮಟ್ಟದಲ್ಲಿ ಯಾವದೇ ಆಸಕ್ತಿ ತೋರುತ್ತಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳ ಈ ಮೌನದ ವಿರುದ್ಧ ಸಂತ್ರಸ್ತರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

- ಕೆ.ಎಂ. ಇಸ್ಮಾಯಿಲ್ ಕಂಡಕರೆ