ಶನಿವಾರಸಂತೆ, ನ. 26: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಶನಿವಾರಸಂತೆ ಶಾಖಾ ಕಚೇರಿ ವ್ಯಾಪ್ತಿಯಲ್ಲಿ ತಾ. 28 ರಂದು ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಶಾಖಾ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಹಾಸನದ 220/66 ಕೆ.ವಿ.ವಿದ್ಯುತ್ ಘಟಕದಲ್ಲಿ ತುರ್ತು ದುರಸ್ತಿ ಕಾರ್ಯ ಇರುವದರಿಂದ ಶನಿವಾರಸಂತೆ ಶಾಖೆಗೆ ಸಂಬಂಧಿಸಿದ ಶನಿವಾರಸಂತೆ ಪಟ್ಟಣ, ದುಂಡಳ್ಳಿ, ನಿಡ್ತ, ಹಂಡ್ಲಿ ಮತ್ತು ಗೌಡಳ್ಳಿ ಗ್ರಾ.ಪಂ.ಗೆ ಸೇರಿದ ಗ್ರಾಮಗಳಿಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಆಗಲಿದ್ದು ಗ್ರಾಹಕರು ಸಹಕರಿಸುವಂತೆ ಶನಿವಾರಸಂತೆ ಚೆಸ್ಕಾಂ ಶಾಖಾಧಿಕಾರಿ ತಿಳಿಸಿದ್ದಾರೆ.