ಗುಡ್ಡೆಹೊಸೂರು, ನ. 26: ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜಾ ಕಾರ್ಯ ನಡೆಯಿತು. ಪೂಜಾ ಕಾರ್ಯವನ್ನು ಕುಶಾಲನಗರದ ಸೋಮೇಶ್ವರ ದೇವಸ್ಥಾನದ ಅರ್ಚಕ ಮಂಜುನಾಥ್ ಭಟ್ ಅವರು ನೆರವೇರಿಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಬಿ.ಎಸ್. ದಿನೇಶ್, ಮಾಜಿ ಅಧ್ಯಕ್ಷ ಬಿ.ಎನ್. ಕಾಶಿ, ಶಾಲಾ ಮುಖ್ಯಶಿಕ್ಷಕ ಸಣ್ಣಸ್ವಾಮಿ ಮತ್ತು ಸಹಶಿಕ್ಷಕ ವೃಂದದವರು, ಸಿ.ಆರ್.ಪಿ. ಸತ್ಯನಾರಾಯಣ ಮತ್ತು ಕೂಡಿಗೆ ಡಯಟ್ನ ತರಬೇತಿ ಶಿಕ್ಷಕರು ಹಾಜರಿದ್ದರು.