ಮಡಿಕೇರಿ, ನ. 26: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಕ್ಕಂದೂರುವಿನ ಬಸ್ ತಂಗುದಾಣದಲ್ಲಿ ಅಪರಿಚಿತ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದೆ. ಅಂದಾಜು 57 ವರ್ಷ ಪ್ರಾಯದ ವ್ಯಕ್ತಿಯ ದೇಹ ಇದಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಇಲಾಖೆಗೆ ತಿಳಿಸುವಂತೆ (228777) ಪ್ರಕಟಣೆ ಕೋರಿದೆ.