ಗೋಣಿಕೊಪ್ಪ ವರದಿ, ನ. 25 ; ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆಯುತ್ತಿರುವ ಎ. ಡಿವಿಜನ್ ಹಾಕಿ ಲೀಗ್‍ನಲ್ಲಿ ಚಾರ್ಮರ್ಸ್ ಹಾಗೂ ಬೊಟ್ಯತ್‍ನಾಡ್ ತಂಡಗಳು ಸೆಮಿ ಪೈನಲ್‍ಗೆ ಪ್ರವೇಶ ಪಡೆದಿವೆ.

ಡಿಸೆಂಬರ್ 9 ರಂದು ನಡೆಯಲಿರುವ ಸೆಮಿಫೈನಲ್‍ನಲ್ಲಿ ನಾಪೋಕ್ಲು ಶಿವಾಜಿ ಹಾಗೂ ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್, ಚಾರ್ಮರ್ಸ್, ಬೊಟ್ಯತ್ನಾಡ್ ತಂಡಗಳು ಸೆಣೆಸಾಟ ನಡೆಸಲಿವೆ. ಡಿ. 10 ರಂದು ಫೈನಲ್ ಪಂದ್ಯ ನಡೆಯಲಿದೆ.

ಶನಿವಾರದ ಪಂದ್ಯಗಳಲ್ಲಿ ಬೊಟ್ಯತ್ನಾಡ್, ಚಾರ್ಮರ್ಸ್ ಹಾಗೂ ಕಿರುಗೂರು ತಂಡಗಳು ಗೆಲುವು ದಾಖಲಿಸಿದ್ದವು.

ಫಲಿತಾಂಶ : ಕಿರುಗೂರು ತಂಡವು ಪೊದ್ದ್‍ಮಾನಿ ತಂಡವನ್ನು 4-1 ಗೋಲುಗಳಿಂದ ಸೋಲಿಸಿತು. ಕಿರುಗೂರು ಪರ 2ನೇ ನಿಮಿಷದಲ್ಲಿ ಸುಬ್ಬಯ್ಯ, 8 ರಲ್ಲಿ ಸೋಮಣ್ಣ, 18 ರಲ್ಲಿ ಉತ್ತಯ್ಯ, 39 ರಲ್ಲಿ ಬೆಳ್ಯಪ್ಪ, ಪೊದ್ದ್‍ಮಾನಿ ಪರ 34 ರಲ್ಲಿ ಪುನಿತ್ ತಲಾ ಒಂದೊಂದು ಗೋಲು ಹೊಡೆದರು.

ಬೊಟ್ಯತ್ನಾಡ್ ತಂಡವು ಹಾತೂರು ಯೂತ್ ಕ್ಲಬ್ ತಂಡವನ್ನು 3-1 ಗೋಲುಗಳಿಂದ ಮಣಿಸಿ ಸೆಮಿಗೆ ಪ್ರವೇಶ ಪಡೆಯಿತು. ಹಾತೂರು ಪರ 6 ನೇ ನಿಮಿಷದಲ್ಲಿ ಕೌಶಿಕ್, ಬೊಟ್ಯತ್ನಾಡ್ ಪರ 7 ನೇ ನಿಮಿಷದಲ್ಲಿ ಬೋಪಣ್ಣ, 8 ನೇ ನಿಮಿಷದಲ್ಲಿ ಪ್ರಸಾದ್, 9 ನೇ ನಿಮಿಷದಲ್ಲಿ ಚಿಟ್ಯಪ್ಪ ಗೋಲು ಹೊಡೆದು ಗೆಲುವು ತಂದಿತು.

ಚಾರ್ಮರ್ಸ್ ತಂಡವು 4-1 ಗೋಲುಗಳಿಂದ ಟಾಟಾ ಕಾಫಿ ವಿರುದ್ಧ ಜಯ ಗಳಿಸಿ ಸೆಮಿಗೆ ಪ್ರವೇಶ ಪಡೆಯಿತು. ಚಾರ್ಮರ್ಸ್ ಪರ 13 ಹಾಗೂ 39 ನೇ ನಿಮಿಷಗಳಲ್ಲಿ ಕೀರ್ತಿ 2 ಗೋಲು ಹೊಡೆದರು. 16ರಲ್ಲಿ ರೋಹನ್, 36ರಲ್ಲಿ ಸುಬ್ಬಯ್ಯ, ಟಾಟಾ ಕಾಫಿ ಪರ 17 ರಲ್ಲಿ ದಿಲನ್ ಗೋಲು ಹೊಡೆದರು.

ಟೂರ್ನಿಯಲ್ಲಿ ಹಿನ್ನಡೆ ಪಡೆದುಕೊಂಡಿರುವ ತಂಡಗಳಾದ ಕಿರುಗೂರು, ಪೊದ್ದ್‍ಮಾನಿ, ಹಾತೂರು ಯೂತ್ ಕ್ಲಬ್, ಮಲೆನಾಡ್ ಸ್ಪೋಟ್ರ್ಸ್ ಕ್ಲಬ್, ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್, ಕೋಣನಕಟ್ಟೆ ಇಲೆವೆನ್, ಮರ್ಕರಾ ಯುನೈಟೆಡ್, ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್, ಬೇಗೂರು ಈಶ್ವರ ಯೂತ್ ಕ್ಲಬ್, ಬಲಮುರಿ ಮಹಾದೇವ ಸ್ಪೋಟ್ರ್ಸ್ ಕ್ಲಬ್, ಟಾಟಾ ಕಾಫಿ ತಂಡಗಳು ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆಯದೆ ಹೊರ ಬಿದ್ದಿವೆ. ಡಿಸೆಂಬರ್ 9 ರಂದು ಮಧ್ಯಾಹ್ನ ಸೆಮಿ ಫೈನಲ್, 10 ರಂದು ಮಧ್ಯಾಹ್ನ ಫೈನಲ್ ಪಂದ್ಯ ನಡೆಯಲಿವೆ.