ಮಡಿಕೇರಿ, ನ. 26: ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿತ ಗೊಂಡಿರುವ ದೈವವು ಸ್ವಯಂಭೂ ಭೈರವ ಶಕ್ತಿಯ ಲಿಂಗವೆಂದು ಗೋಚರವಾಗುತ್ತಿದೆ ಎಂದು ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಿದೆ. ಸ್ವಯಂಭೂ ಎಂದರೇ ‘ಇಲ್ಲಿಯೇ ಉದ್ಭವ ಲಿಂಗ’ ಎಂದು ಇಲ್ಲಿ ಪರಿಗಣಿಸಲಾಗದಿದ್ದರೂ ಕಾಶಿಯಿಂದ ತಂದಾಗ ಅದು ಅಲ್ಲಿ ಸ್ವಯಂ ಉದ್ಭವಿತವೆಂದು ಗೋಚರ ವಾಗುತ್ತಿದ್ದು, ಶಿಲ್ಪಿಗಳಿಂದ ರಚಿತವಾದುದಲ್ಲ. ಅಲ್ಲದೇ ಭೈರವ ಶಕ್ತಿ ಈ ಲಿಂಗದಲ್ಲಿ ಕಂಡುಬರುತ್ತಿದ್ದು, ಅತ್ಯಂತ ಪ್ರಭಾವಶಾಲಿಯಾಗಿದೆ ಎಂದು ದೈವಜ್ಞರು ನುಡಿದರು.200 ವರ್ಷಗಳ ಹಿಂದೆ ಅನೇಕ ದೋಷಗಳ ನಿವಾರಣೆಗಾಗಿ ನಿರ್ಮಿಸಿರುವ ಶ್ರೀ ಓಂಕಾರೇಶ್ವರ ದೇವಾಲಯವು ಉತ್ತಮ ಮಣ್ಣಿನೊಂದಿಗೆ ಕೂಡಿರುವ ಸ್ಥಳದಲ್ಲಿ ಕೊಡಗು ರಾಜರಿಂದ ಕಟ್ಟಲ್ಪಟ್ಟಿದೆ. ಪ್ರಸಕ್ತ ಇರುವಂತಹ ದೋಷ ಬಾಧೆ ಗಳನ್ನು ಪರಿಹರಿಸಿಕೊಂಡ ಬಳಿಕವಷ್ಟೆ ಅಷ್ಟಬಂಧ ಬ್ರಹ್ಮ ಕಳಶೋತ್ಸವ ನೆರವೇರಿಸಿ ಕೊಳ್ಳ ಬೇಕೆಂದು, ದೈವಜ್ಞರಾದ ಸುಬ್ರಮಣ್ಯ ಭಟ್ ಸಲಹೆ ನೀಡಿದ್ದಾರೆ.
(ಮೊದಲ ಪುಟದಿಂದ) ಮೂರನೇ ದಿನವಾದ ಇಂದು ಶ್ರೀ. ಓಂಕಾರೇಶ್ವರ ದೇವಾಲಯದಲ್ಲಿ ಮುಂದುವರಿದ ಅಷ್ಟಮಂಗಲ ಪ್ರಶ್ನೆಯಲ್ಲಿ ತಾಂಬೂಲ ಗೋಚರ ಫಲ ನುಡಿದ ಅವರು, ದೇವಾಲಯದ ಕಲಶ ಗೋಪುರದಲ್ಲಿ ಸೋರುವಿಕೆಯೂ ಸೇರಿದಂತೆ ಶಿಥಿಲಗೊಂಡಿರುವ ಮಾಡುವಿನ ದುರಸ್ತಿ ಕೈಗೊಳ್ಳಬೇಕೆಂದು ಗಮನ ಸೆಳೆದರು. ಶ್ರೀ ಓಂಕಾರೇಶ್ವರ ಪರಿವಾರ ದೇವತೆಗಳ ಸÀನ್ನಿಧಿಗಳಲ್ಲಿ ಪರ್ವ ಕಾಲದ ಸೇವೆ ಹೊರತು ಪ್ರತಿಷ್ಠಾಪನಾ ವಾರ್ಷಿಕೋತ್ಸವ ಇತ್ಯಾದಿಗಳನ್ನು ಕಾಲಕಾಲಕ್ಕೆ ನೆರವೇರಿಸಿಕೊಂಡು ಬಂದಿಲ್ಲವೆಂದು ಗೋಚರ ಫಲ ನುಡಿದರು. ಪ್ರಸಕ್ತ ಶ್ರೀ ಓಂಕಾರೇಶ್ವರ ಬಿಂಬವು ಅತ್ಯಂತ ಸೌಂದರ್ಯಪೂರ್ಣ, ಶಾಂತರೀತಿ ಯಿಂದ ಕೂಡಿರುವ ಕಾಶಿಯಿಂದ ತಂದು ಪ್ರತಿಷ್ಠಾಪಿತ ಶಿವಲಿಂಗವೆಂದು ಗೋಚರಿಸುವದಾಗಿ ದೈವಜ್ಞರು ವರ್ಣಿಸಿದರು.
ಆದರೆ ಬ್ರಹ್ಮ ರಾಕ್ಷಸನ ಮೂಲ ಸಂಕಲ್ಪದೊಂದಿಗೆ ಬಿಂಬ ಪ್ರತಿಷ್ಠಾಪಿತ ಶಿವಾಲಯ ಇದಾಗಿದ್ದು ಭೈರವನ ಅಂಶ ಗೋಚರಿಸುತ್ತಿದೆ ಎಂದ ಅವರು ನಿತ್ಯ ಪೂಜಾದಿಗಳಲ್ಲಿ ಲೋಪವಾಗದಂತೆ ಸರಿಯಾದ ರೀತಿ ಸೇವೆಗಳನ್ನು ಕೈಗೊಂಡಲ್ಲಿ ಮಾತ್ರ ದೈವಿಕ ಶಕ್ತಿಯ ಅನುಭವ ಉಂಟಾಗಲಿದೆ ಎಂದು ವರ್ಣಿಸಿದರು. ಸನ್ನಿಧಿಗೆ ಬರುವ ಮಹಿಳಾ ಭಕ್ತರಿಗೆ ಪೂಜಾ ಸsÉೀವೆಗಳಿಗೆ ಸೂಕ್ತ ವ್ಯವಸ್ಥೆಗಳನ್ನು ಕೈಗೊಳ್ಳುವದು ದೇವಾಲಯ ವ್ಯವಸ್ಥಾಪನಾ ಸಮಿತಿ ಹಾಗೂ ಸರಕಾರದ ಕರ್ತವ್ಯವೆಂದು ಉಲ್ಲೇಖಿಸಿದ ಅವರು, ಅರ್ಚಕರು ಮತ್ತು ಸಿಬ್ಬಂದಿಗೆ ವಸತಿಯೊಂದಿಗೆ ಮೂಲ ಸೌಕರ್ಯ ಒದಗಿಸುವಂತೆ ಪ್ರಶ್ನೆಯಲ್ಲಿ ನಿರ್ದೇಶನ ಇರುವದಾಗಿ ನುಡಿದರು.
ಭೂ ಹಿಡುವಳಿದಾರರ
ಕೊಡುಗೆ ಅವಶ್ಯ
ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ನಿತ್ಯ ಸೇವೆಯೊಂದಿಗೆ ಬ್ರಾಹ್ಮಣರು - ಭಕ್ತರ ನಿಮಿತ್ತ ಅನ್ನದಾನ ಸೇವೆಗಾಗಿ ಸಾಕಷ್ಟು ಆಸ್ತಿಯನ್ನು ರಾಜ ಪರಂಪರೆಯಲ್ಲಿ ಕೊಡುಗೆ ನೀಡಿದೆ. ಅಂತಹ ಭೂ ಹಿಡುವಳಿದಾರರು ಕಾಲಾನಂತರದಲ್ಲಿ ದೇವಾಲಯಕ್ಕೆ ಸಲ್ಲಬೇಕಾದ ದವಸ ಧಾನ್ಯ ನೀಡದೆ ಲೋಪವಾಗುತ್ತಿದೆ. ಇಂತಹವರು ಶಿವನ ಕೋಪಕ್ಕೆ ಗುರಿಯಾಗುತ್ತಿದ್ದು ತಾವಾಗಿ ಮುಂದೆ ಬಂದು ದೇವರ ಸೇವೆಗೆ ಅಗತ್ಯ ನೆರವು ಒದಗಿಸುವದು ಒಳ್ಳೆಯದೆಂದು ನೆನಪಿಸಿದರು. ಸನ್ನಿಧಿಯಲ್ಲಿ ಭಕ್ತರ ಸೇವೆಯೊಂದಿಗೆ ವೇದ ಪಾರಾಯಣ, ಭಗವತರ ನಾಮ ಪಠಣ, ಮಂಗಳ ವಾದ್ಯಗಳ ಸೇವೆಗಳು ನಿಂತುಹೋಗಿದ್ದು ಇವೆಲ್ಲವನ್ನೂ ಮುಂದುವರೆಸಿದರೆ ನಾಡಿಗೆ ಮತ್ತಷ್ಟು ಒಳಿತಾಗುವದು ಎಂದು ಭವಿಷ್ಯ ನುಡಿದರು. ಮುಖ್ಯವಾಗಿ ಶ್ರೀ ಓಂಕಾರೇಶ್ವರ, ಕೋಟೆ ಮಹಾಗಣಪತಿ, ಆಂಜನೇಯ, ಅಶ್ವತ್ಥಕಟ್ಟೆಯ ಸನ್ನಿಧಿಗಳಲ್ಲಿ ಸರ್ವಕಾಲಿಕ ಸೇವೆಗಳಲ್ಲಿನ ಲೋಪದಿಂದ ಗತಕಾಲದಲ್ಲಿ ಅನೇಕ ದುರಿತಗಳು ಸಂಭವಿಸಿವೆಯೆಂದು ದೈವಜ್ಞರು ಬೊಟ್ಟು ಮಾಡಿದರು.
ಇಂತಹ ದುರಿತಗಳನ್ನು ತಂತ್ರಿಗಳು, ವಾಸ್ತು ತಜ್ಞರ ಮೂಲಕ ಅಷ್ಟಬಂಧ ಬ್ರಹ್ಮ ಕಳಶೋತ್ಸವಕ್ಕೆ ಮುಂಚಿತವಾಗಿ ಸರಿಪಡಿಸಿಕೊಂಡು ಮತ್ತೆ ಮತ್ತೆ ದೋಷಗಳಿಗೆ ಅವಕಾಶವಾಗದಂತೆ ಜಾಗೃತಿ ವಹಿಸುವಂತೆ ಸಲಹೆ ನೀಡಿದರಲ್ಲದೆ, ಭವಿಷ್ಯದ ಪೂಜಾ ವಿಧಾನಗಳು ಹಾಗೂ ಸನ್ನಿಧಿಯ ಕಟ್ಟು ಪಾಡುಗಳ ಬಗ್ಗೆ ನಿರ್ದೇಶನ ಪಡೆದುಕೊಳ್ಳಬೇಕೆಂದು ಸಮಿತಿ ಮತ್ತು ಅರ್ಚಕ ವೃಂದಕ್ಕೆ ತಿಳಿಹೇಳಿದರು. ತೃತೀಯ ದಿನದ ಪ್ರಶ್ನೆಯಲ್ಲಿ ದೇವಾಲಯ ವ್ಯವಸ್ಥಾಪನಾ ಸಮಿತಿ ಪ್ರಮುಖರು, ಸದ್‍ಭಕ್ತರು, ಅರ್ಚಕ ಬಳಗ, ಸಿಬ್ಬಂದಿ ಹಾಜರಿದ್ದರು.
ಇಂದೂ ಮುಂದುವರಿಕೆ
ತಾ. 27 ರಂದು (ಇಂದು) ಕೂಡ ಬೆಳಿಗ್ಗೆ 10 ಗಂಟೆಯಿಂದ ದೇವಾಲಯದ ಓಂಕಾರ ಸದನದಲ್ಲಿ ಪ್ರಶ್ನೆ ಮುಂದುವರೆಯಲಿದ್ದು ನೀಲೇಶ್ವರ ಪದ್ಮನಾಭ ತಂತ್ರಿಗಳು ಬ್ರಹ್ಮ ಕಲಶೋತ್ಸವ ಹಾಗೂ ದೋಷ ಪರಿಹಾರ ಸಂಬಂಧ ಸೂಕ್ತ ನಿರ್ದೇಶನ ನೀಡಲಿದ್ದಾರೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್ ‘ಶಕ್ತಿ’ಗೆ ತಿಳಿಸಿದ್ದಾರೆ.