ಶನಿವಾರಸಂತೆ, ನ. 25: ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಡಿಕೇರಿ ವತಿಯಿಂದ ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ಹಕ್ಕುಗಳ ಹಬ್ಬ ಕಾರ್ಯಕ್ರಮ ನಡೆಯಿತು.
ಮಕ್ಕಳ ಹಕ್ಕುಗಳ ಜಾಥಾ, ಪ್ರಬಂಧ ಸ್ಪರ್ಧೆ, ರಸ ಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊಲೀಸ್ ಠಾಣಾಧಿಕಾರಿ ಕೃಷ್ಣನಾಯಕ್ ವಹಿಸಿದ್ದರು. ಸಹಾಯಕ ಠಾಣಾಧಿಕಾರಿ ಹೆಚ್.ಎಂ. ಗೋವಿಂದ, ಮಕ್ಕಳ ಸಹಾಯವಾಣಿಯ ಅಧಿಕಾರಿ ಬಿ.ಕೆ. ಕುಮಾರಿ, ಮಕ್ಕಳ ರಕ್ಷಣಾ ಘಟಕದ ಸಚಿನ್ ಸುವರ್ಣ, ಪದವಿ ಪೂರ್ವ ಕಾಲೇಜಿನ ಮುಖ್ಯ ಶಿಕ್ಷಕ ಗೋಪಾಲ್ ಮಾತನಾಡಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಪೊಲೀಸ್ ಸಹಾಯಕಾಧಿಕಾರಿ ಶಶಿ, ಶಿಕ್ಷಕರಾದ ರಂಗಸ್ವಾಮಿ, ಶುಭಾನ, ಸರೋಜ, ಮಂಗಳ, ಮಕ್ಕಳ ರಕ್ಷಣಾ ಘಟಕದ ಸಚಿನ್, ಅಹಮ್ಮದ್ ನಿಸಾರ್, ಯೋಗೇಶ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಹಮ್ಮದ್ ಸ್ವಾಗತಿಸಿ, ಶಿಕ್ಷಕಿ ಭವನ ವಂದಿಸಿದರು.