ಶ್ರೀಮಂಗಲ, ನ. 25: ಬಿರುನಾಣಿ ಗ್ರಾಮದಲ್ಲಿ ಭಾನುವಾರ ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ರೈತರೋರ್ವರ ಎರಡು ಹಸುವನ್ನು ಹುಲಿ ಕೊಂದು ಹಾಕಿದ್ದು, ಇದರಲ್ಲಿ ಒಂದು ಹಸುವನ್ನು ಸ್ವಲ್ಪ ದೂರ ಎಳೆದೊಯ್ದು ಬಾಗಶಃ ತಿಂದು ಹಾಕಿದೆ.
ನೆರೆಯ ಗ್ರಾಮವಾದ ಪರಕಟಗೇರಿಯಲ್ಲಿ ತಾ. 15ರಂದು ಕಳಕಂಡ ಲವ ಎಂಬವರಿಗೆ ಸೇರಿದ ಹಸುವನ್ನು ಬಲಿ ಪಡೆದಿತ್ತು.
ಹುಲಿ ದಾಳಿಯ ವಿಚಾರ ತಿಳಿಯುತ್ತಿದ್ದಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದರು. ಶ್ರೀಮಂಗಲ ವಲಯ ಅರಣ್ಯಾಧಿಕಾರಿ ಸ್ಥಳಕ್ಕೆ ಆಗಮಿಸಬೇಕು ಹಾಗೂ ಹುಲಿ ಸೆರೆಗೆ ತಕ್ಷಣದಿಂದ ಕಾರ್ಯಪ್ರವೃತ್ತರಾಗು ವಂತೆ ಒತ್ತಾಯಿಸಿದರು. ಮನವಿಗೆ ಸ್ಪಂದಿಸಿ ಕುಟ್ಟ ವ್ಯಾಪ್ತಿಯಲ್ಲಿ ಕಾಡಾನೆ ಕೂಂಬಿಂಗ್ ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಾಧಿಕಾರಿ ವಿರೇಂದ್ರ ಮರಿಬಸಣ್ಣವರ್ ಅವರು ಹುಲಿ ಸೆರೆಗೆ ಬೋನ್ ಇರಿಸಿ ಕಾರ್ಯಾಚರಣೆ ಕೈಗೆತ್ತಿಕೊಳ್ಳುವದಾಗಿ ಭರವಸೆ ನೀಡಿದರು. ಈ ಭರವಸೆಯಿಂದ ಪ್ರತಿಭಟನೆಯನ್ನು ರೈತ ಸಂಘದ ಸದಸ್ಯರು ಕೈಬಿಟ್ಟರು.
ಈ ಸಂದರ್ಭ ರೈತ ಸಂಘದ ಕರ್ತಮಾಡ ಸುಜುಪೆÇನ್ನಪ್ಪ, ಧನು, ರತನ್‍ಚಂಗಪ್ಪ, ನಿತಿಶ್, ಅಣ್ಣಾಳಮಾಡ ಗಿರೀಶ್, ರಾಬಿನ್, ರಾಜ, ಕಳಕಂಡ ಜೀತು ಮತ್ತಿತರು ಇದ್ದರು.
 
						