ಮಡಿಕೇರಿ, ನ. 26: ನಗರಸಭಾ ವ್ಯಾಪ್ತಿಯ ಎರಡನೇ ವಾರ್ಡ್ನ ರಾಣಿಪೇಟೆಯ ಗೆಜ್ಜೆ ಸಂಗಪ್ಪ ಮಂಟಪ ಮುಂಭಾಗ ಹಾಗೂ ಕೋದಂಡರಾಮ ದೇವಾಲಯ ವ್ಯಾಪ್ತಿಯ ಬೋರ್ವೆಲ್ ಮೋಟಾರ್ ಕೆಟ್ಟು ನಿಂತಿದ್ದು, ಕಳೆದ 22 ದಿನಗಳಿಂದ ನೀರಿನ ಸಮಸ್ಯೆ ಕಾಡುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದರೂ ಕೂಡ ಯಾವದೇ ಪ್ರಯೋಜವಾಗಿಲ್ಲ ಎಂದು ಆರೋಪಿಸಿರುವ ನಗರಸಭಾ ಮಾಜಿ ನಾಮನಿರ್ದೇಶಿತ ಸದಸ್ಯ ಉದಯಕುಮಾರ್ ಇನ್ನೆರಡು ದಿನಗಳೊಳಗೆ ಸಮಸ್ಯೆ ಪರಿಹಾರವಾಗದಿದ್ದರೆ ತಾ. 29ರಂದು ಖಾಲಿ ಕೊಡದೊಂದಿಗೆ ನಗರಸಭೆ ಎದುರು ಧರಣಿ ಕೂರುವದಾಗಿ ತಿಳಿಸಿದ್ದಾರೆ.