ಗುಡ್ಡೆಹೊಸೂರು, ನ. 26: ಮೈಸೂರಿನ ಕೃಷಿ ವಿಜ್ಞಾನಿ ಕುದುಪಜೆ ಚಂದ್ರಶೇಖರ್ ಅವರು ಜಪಾನ್ ದೇಶದಲ್ಲಿ ನಡೆದ ರಾಷ್ಟ್ರೀಯ ಕೃಷಿ ಮತ್ತು ಆಹಾರ ಸಂಶೋಧನಾ ಸಂಸ್ಥೆ(ನರೋ)ಯ ಕೃಷಿ ವಿಜ್ಞಾನದಲ್ಲಿ ತೊಡಗಿಸಿಕೊಂಡಿದ್ದು, ಜಪಾನ್‍ನ ಸಿರಿಕಲ್ಚರ್ ಮತ್ತು ರೇಷ್ಮೆ ಉದ್ಯಮದ 25ನೇ ಅಂತರರಾಷ್ಟ್ರೀಯ ಕಾರ್ಯಕ್ರಮದಲ್ಲಿ ರೇಷ್ಮೆ ಹುಳುಗಳ ಕ್ಷೇತ್ರಗಳಲ್ಲಿ ತಂತ್ರಜ್ಞಾನ, ರೇಷ್ಮೆ ಜವಳಿ ಮತ್ತು ವಿವಿಧ ದೇಶಗಳ ರೇಷ್ಮೆ ಉದ್ಯಮದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಇವರು ಮೈಸೂರಿನ ರೇಷ್ಮೆ ಇಲಾಖೆಯಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಮೂಲತಃ ಭಾಗಮಂಡಲ ನಿವಾಸಿಯಾಗಿದ್ದಾರೆ.