ಕಣಿವೆ, ನ. 24: ಹಾರಂಗಿ ಜಲಾಶಯದ ಎಡದಂಡೆಯ ಮೇಲೆ 1999 ರಲ್ಲಿ ಆರಂಭಿಸಲಾದ ಜಲವಿದ್ಯುತ್ ಘಟಕದಲ್ಲಿ ಈ ಬಾರಿ ಗರಿಷ್ಠ ಪ್ರಮಾಣದ ವಿದ್ಯುತ್ ಉತ್ಪಾದಿಸುವ ಗುರಿ ಹೊಂದುವ ನಿರೀಕ್ಷೆ ಇದೆ ಎಂದು ಘಟಕದ ವ್ಯವಸ್ಥಾಪಕ ಶಿವಸುಬ್ರಮಣ್ಯಂ ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಆರಂಭಿಸಲಾದ 9 ಮೆಗಾವ್ಯಾಟ್ ಹಾಗೂ ಎರಡನೇ ಹಂತದಲ್ಲಿ ಆರಂಭಿಸಲಾದ 6 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಈ ವರ್ಷ ಹೆಚ್ಚು ಮಳೆ ಸುರಿದ ಕಾರಣ; ಈ ಹಿಂದಿನ ವರ್ಷಗಳಿಗಿಂತ ಹೆಚ್ಚಾಗಿ ಸುಮಾರು 40 ಮಿಲಿಯನ್ ಯೂನಿಟ್ ಉತ್ಪಾದನಾ ಗುರಿ ಹೊಂದಲಾಗಿದೆ.ಕಳೆದ ಮುಂಗಾರಿನಲ್ಲಿ ಮಳೆ ತಡವಾಗಿ ಸುರಿದಿದ್ದರಿಂದ ಘಟಕದಲ್ಲಿ ವಿದ್ಯುತ್ ಉತ್ಪಾದನೆಯೇ ಆಗಲಿಲ್ಲ. ಸಾಮಾನ್ಯವಾಗಿ ಜೂನ್‍ನಲ್ಲಿ ಮಳೆ ಸುರಿದು ಜಲಾಶಯ ಭರ್ತಿ ಆದರೆ ಮಾತ್ರ ವಿದ್ಯುತ್
(ಮೊದಲ ಪುಟದಿಂದ) ಉತ್ಪಾದನಾ ಕಾರ್ಯಕ್ಕೆ ಅನುವಾಗುತ್ತದೆ. ಆದರೆ ಈ ಬಾರಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಮಳೆ ಸುರಿಯಲಿಲ್ಲ. ಆಗಸ್ಟ್ ಮೊದಲ ವಾರದಲ್ಲಿ ಕೆಲವೇ ದಿನಗಳ ಅಂತರದಲ್ಲಿ ಜಲಾಶಯ ಭರ್ತಿ ಆಯಿತು. ಅಂದಿನಿಂದ ಇಂದಿನ ತನಕವೂ ವಿದ್ಯುತ್ ಉತ್ಪಾದನೆಯಲ್ಲಿ ಘಟಕ ತೊಡಗಿಸಿಕೊಂಡಿದೆ ಎಂದು ಶಿವಸುಬ್ರಮಣ್ಯಂ ತಿಳಿಸಿದರು.
ಘಟಕ ಆರಂಭವಾದ 1999 ರಲ್ಲಿ 11.08 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿತ್ತು. 1999- 2000ರ ಸಾಲಿನಲ್ಲಿ 11.04 ಯೂನಿಟ್, 2000 - 2001ರಲ್ಲಿ 23.09 , 2001-02ರಲ್ಲಿ 24.05, 2002-03ರಲ್ಲಿ 23, 2003-04ರಲ್ಲಿ 20.09, 2004-05ರಲ್ಲಿ 23.02, 2005-06ರಲ್ಲಿ 27.02, 2006-07ರಲ್ಲಿ 25.09 2007-08ರಲ್ಲಿ 30.05, 2008-09ರಲ್ಲಿ 23, 2009-10ರಲ್ಲಿ 28 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿತ್ತು. ಮತ್ತೆ ಘಟಕದಲ್ಲಿ ಹೆಚ್ಚುವರಿಯಾಗಿ 6 ಮೆಗಾವ್ಯಾಟ್ ಸಾಮಥ್ರ್ಯದ ಮತ್ತೊಂದು ಮಿಷನರಿ ಅಳವಡಿಸಿದ ಬಳಿಕ 2010-11ರಲ್ಲಿ 25.08 ಯೂನಿಟ್, 2011-12ರಲಿ ಅತ್ಯಂತ ಗರಿಷ್ಠ ಅಂದರೆ 40 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿತ್ತು.
2012-13ರಲ್ಲಿ 23.02, 2013-14ರಲ್ಲಿ ಅತ್ಯಂತ ಹೆಚ್ಚು 41.09 ಮಿಲಿಯನ್ ಯೂನಿಟ್ ಉತ್ಪಾದನೆಯಾಗಿತ್ತು. 2014-15ರಲ್ಲಿ 27.07, 2015-16ರಲ್ಲಿ 20.08, 2016-17ರಲ್ಲಿ 23.05, 2017-18ರಲ್ಲಿ 24.08, 2018-19ರಲ್ಲಿ 25 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿತ್ತು. ಈ ಬಾರಿ 40 ಮಿಲಿಯನ್ ಯೂನಿಟ್‍ಗೂ ಹೆಚ್ಚು ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಘಟಕದಲ್ಲಿ ಉತ್ಪಾದನೆ ಆಗುವ ವಿದ್ಯುತ್ ಅನ್ನು ಕುಶಾಲನಗರ ಚೆಸ್ಕಾಂಗೆ ಮಾರಾಟ ಮಾಡುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ಕೆಪಿಟಿಸಿಎಲ್ ಈ ಬಾರಿ ಯೂನಿಟ್ ಒಂದಕ್ಕೆ 1 ರೂ 90 ಪೈಸೆಗೆ ಖರೀದಿಸುವದಾಗಿ ಹೇಳಿದೆ. ಆದರೆ ಕಳೆದ ಎರಡು ವರ್ಷಗಳ ಹಿಂದೆ ಯೂನಿಟ್ ಒಂದಕ್ಕೆ 3.50 ರೂ.ಗಳನ್ನು ನೀಡುತಿತ್ತು ಎಂದು ಶಿವಸುಬ್ರಮಣ್ಯಂ ವಿವರಿಸಿದರು.