ಸುಂಟಿಕೊಪ್ಪ, ನ. 24: ಪೊಲೀಸ್ ಇಲಾಖೆಯ ವತಿಯಿಂದ ಠಾಣೆಯÀಲ್ಲಿ ಪಿಎಸ್‍ಐ ಬಿ. ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ಪರಿಶಿಷ್ಟರ ಸಭೆ ನಡೆಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಠಾಣಾಧಿಕಾರಿ ಬಿ. ತಿಮ್ಮಪ್ಪ ಮಾತನಾಡಿ, ಸರಕಾರ ಎಲ್ಲರನ್ನು ಎಲ್ಲಾ ಕ್ಷೇತ್ರದಲ್ಲಿ ಸಮಾನವಾಗಿ ಪರಿಗಣಿಸುತ್ತಿದೆ. ನಿಮ್ಮಲ್ಲಿ ಯಾವದಾದರೂ ಕುಂದುಕೊರತೆಗಳಿದ್ದಲ್ಲಿ ನೇರವಾಗಿ ತಿಳಿಸಿ, ಅದನ್ನು ಇಲಾಖೆಯಿಂದ ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡಿ ಪರಿಹರಿಸಲು ಕೈ ಜೋಡಿಸಲಾಗುವದು ಎಂದರು.

ಇದಕ್ಕೆ ಉತ್ತರಿಸಿದ ದಲಿತ ಸಂಘದ ಅಧ್ಯಕ್ಷ ಎಂ.ಎಸ್. ರವಿ ಅಂಬೇಡ್ಕರ್ ನಗರ ಚಾಮುಂಡೇಶ್ವರಿ ಬಡಾವಣೆ ಕೆಇಬಿ ಬಡಾವಣೆ ಜನತಾ ಕಾಲೋನಿ ಈ ಎಲ್ಲಾ ಬಡಾವಣೆಯ ನಾವುಗಳು ಜಾತಿಬೇದವಿಲ್ಲದೆ ಜೀವನ ನಡೆಸುತ್ತಿದ್ದೇವೆ. ಎಲ್ಲಾ ಧರ್ಮಿಯರೊಂದಿಗೆ ಸಹಭಾಳ್ವೆಯೊಂದಿಗೆ ಜೀವನ ಸಾಗಿಸುತ್ತಿದ್ದೇವೆ. ಜನತಾ ಕಾಲೋನಿಗೆ ತೆರಳುವ ಹಾದಿ ಕಿರಿದಾಗಿದೆ. ಅಲ್ಲದೆ ಅದೇ ಹಾದಿಯ ಬದಿಯಲ್ಲಿ ಕುರಿ ಮಾಂಸ ಕೋಳಿ ಮಾಂಸ ಅಂಗಡಿಗಳು ವ್ಯವಹರಿಸುತ್ತಿದ್ದು ಇದರ ತ್ಯಾಜ್ಯ ರಸ್ತೆ ಬದಿ ಧುರ್ವಾಸನೆಯಿಂದ ಕೂಡಿದೆ. ಇದರಿಂದ ನಾನಾ ರೋಗಗಳು ಹರಡುವ ಸಾಧ್ಯತೆ ಇದೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು. ಇದಕ್ಕೆ ಉತ್ತರಿಸಿದ ಠಾಣಾಧಿಕಾರಿ ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡುವದಾಗಿ ತಿಳಿಸಿ ಕಾನೂನಿಗೆ ಎಲ್ಲರೂ ತಲೆಬಾಗಲೇ ಬೇಕಾಗಿದೆ. ಅದಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ಎಎಸ್‍ಐ ಕಾವೇರಪ್ಪ, ದಲಿತ ಸಂಘದ ಗೌರವ ಅಧ್ಯಕ್ಷ ಹೆಚ್.ಎಂ. ಕಾವೇರಪ್ಪ, ರಾಮಚಂದ್ರ, ಖಜಾಂಚಿ ಜಯಣ್ಣ, ಸಂಘಟನಾ ಕಾರ್ಯದರ್ಶಿ ರವಿಶಂಕರ್, ಸರೇಶ, ಜನಾರ್ದನ, ಸಂಘದ ಸದಸ್ಯರಾದ ಲಕ್ಷ್ಮಣ, ರಾಜು, ಬೈರಾ ಆನಂದ ಇದ್ದರು.