ಶನಿವಾರಸಂತೆ, ನ. 24: ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಾಕುಂದ ಗ್ರಾಮದ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಸಮೀಪ ಸೋಮವಾರಪೇಟೆ ತಾ.ಪಂ. ಸದಸ್ಯ ಹೆಚ್.ಬಿ. ಕುಶಾಲಪ್ಪ ಅವರ ಅನುದಾನದ ರೂ. 1,50,000 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಮುದಾಯ ಭವನಕ್ಕೆ ಕಿರಿಕೊಡ್ಲಿ ಮಠದ ಮಠಾಧೀಶ ಸದಾಶಿವ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದರು. ತಾ.ಪಂ. ಸದಸ್ಯ ಕುಶಾಲಪ್ಪ, ಗ್ರಾಮದ ಪ್ರಮುಖರಾದ ಸಿ.ಬಿ. ಜಯರಾಜ್, ಪಟೇಲ್, ವಿರೂಪಾಕ್ಷ ಮಾತನಾಡಿದರು. ಗ್ರಾಮಸ್ಥರಾದ ಸಿ.ಕೆ. ಹಾಲಪ್ಪ, ಮನು, ಸಿ.ಎಂ. ವಸಂತ, ಕೆ.ಜಿ. ವೀರಪ್ಪ, ಸಿ.ಕೆ. ಜವರಯ್ಯ, ಮೀನಾಕ್ಷಿ, ಸುಧಾ, ಮಂಜುಳ, ಹೇಮಲತಾ, ದೇವಸ್ಥಾನದ ಅಧ್ಯಕ್ಷ ಕೆ.ಬಿ. ಪ್ರೇಮಕುಮಾರ್, ಕಾರ್ಯದರ್ಶಿ ಸಿ.ಪಿ. ಪ್ರಸನ್ನ, ಗುಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಎಸ್. ರಾಮು, ಗುತ್ತಿಗೆದಾರ ಲತೀಫ್, ಇತರ ಗ್ರಾಮಸ್ಥರು ಇದ್ದರು. ಜಯಣ್ಣ ವಂದಿಸಿದರು.