ಪೊನ್ನಂಪೇಟೆ, ನ. 24: ಕೊಡವ ಎಜುಕೇಷನ್ ಸೊಸೈಟಿ, ಕೂರ್ಗ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಪೊನ್ನಂಪೇಟೆಯ 2019-2022ನೇ 3 ವರ್ಷದ ಅವಧಿಗೆ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದು, ಮತದಾನ ರದ್ದಾಗಿರುತ್ತದೆ ಎಂದು ಚುನಾವಣಾಧಿಕಾರಿ ವಕೀಲ ಮತ್ರಂಡ ಪಿ. ಅಪ್ಪಚ್ಚು ತಿಳಿಸಿದ್ದಾರೆ.
ಸಂಸ್ಥೆಯ 21ನೇ ವಾರ್ಷಿಕ ಮಹಾಸಭೆ ತಾ. 30 ರಂದು ಬೆಳಿಗ್ಗೆ 11 ಗಂಟೆಗೆ ಸಂಸ್ಥೆಯ ಅಧ್ಯಕ್ಷ ಚೆಪ್ಪುಡೀರ ಪಿ ಬೆಳ್ಯಪ್ಪ ಅಧ್ಯಕ್ಷತೆಯಲ್ಲಿ ಕೂರ್ಗ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆವರಣದಲ್ಲಿ ನಡೆಯಲಿದೆ.