ಮಡಿಕೇರಿ, ನ. 24: ವೀರಾಜಪೇಟೆ ಸಮೀಪದ ತಂಬ್ರಾನ್ ಫುಟ್ಬಾಲ್ ಕ್ಲಬ್ ಕರಡ ಇವರ ವತಿಯಿಂದ ಎರಡನೇ ವರ್ಷದ 7+2 ಸೂಪರ್ ಸೆವೆನ್ಸ್ ಫುಟ್ಬಾಲ್ ಪಂದ್ಯಾಟ ತಾ. 30 ಹಾಗೂ ಡಿಸೆಂಬರ್ 1 ರಂದು ಕರಡ ಶಾಲಾ ಮೈದಾನದಲ್ಲಿ ನಡೆಯಲಿದೆ.
ಪ್ರಥಮ ಬಹುಮಾನ ಟ್ರೋಫಿಯೊಂದಿಗೆ ರೂ. 15 ಸಾವಿರ ನಗದು, ದ್ವಿತೀಯ ಬಹುಮಾನ ಟ್ರೋಫಿಯೊಂದಿಗೆ ರೂ. 10 ಸಾವಿರ ನಗದು, ಹಾಗೂ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9482864093, 7338045073, 8861120186, 9663350142 ಸಂಪರ್ಕಿಸಬಹುದು.