ವೀರಾಜಪೇಟೆ, ನ. 24: ಇತ್ತೀಚೆಗಷ್ಟೇ ಗೋಣಿಕೊಪ್ಪಲುವಿನ ಲಯನ್ಸ್ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿದ್ದಾರೆ. ಜೂನಿಯರ್ ವಿಭಾಗದಲ್ಲಿ (17ರ ವಯೋಮಾನಕ್ಕಿಂತ ಕೆಳಪಟ್ಟವರು) 45 ಕೆಜಿ - 60 ಕೆಜಿ ತೂಕದೊಳಪಟ್ಟ ವಿಭಾಗದಲ್ಲಿ 10ನೇ ತರಗತಿಯ ಮೌನ ಎಂ.ಬಿ., ಪೂವಣ್ಣ ಐ.ಕೆ. 9ನೇ ತರಗತಿಯ ಸೋಮಣ್ಣ ಬಿ.ಇ., ಅಕ್ಷರ ಡಿ., 8ನೇ ತರಗತಿಯ ಅಯ್ಯಪ್ಪ ಪಿ.ಎ. ಇವರುಗಳು ಪ್ರಥಮ ಸ್ಥಾನಗಳಿಸಿ ಡಿ. 19ರಂದು ಬೆಳಗಾಂನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಪಂದ್ಯಕ್ಕೆ ಆಯ್ಕೆಯಾಗಿರುತ್ತಾರೆ. 9ನೇ ತರಗತಿಯ ರಿಜಾóವುಲ್ಲಾ ಅಹಮ್ಮದ್, 8ನೇ ತರಗತಿಯ ಲಿತನ್ ಪಿ.ಪಿ., ನಾಚಪ್ಪ ಎನ್.ಎಮ್. ದ್ವಿತೀಯ ಸ್ಥಾನ ಪಡೆದಿದ್ದಾರೆ. 10ನೇ ತರಗತಿಯ ಸುಬ್ಬಯ್ಯ ಎಮ್.ಜಿ., ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕಿ ಪ್ರಮೀಳಾ ಪಿ.ಬಿ., ಕರಾಟೆ ತರಬೇತುದಾರ ಕರ್ನಂಡ ಸೋಮಣ್ಣ ಈ ಸಂದರ್ಭ ಇದ್ದರು.
 
						