ಗೋಣಿಕೊಪ್ಪ ವರದಿ, ನ. 24: ಶ್ರೀಮಂಗಲ ನಿರೀಕ್ಷಣಾ ಮಂದಿರ ಆವರಣದದಲ್ಲಿ ನೈಟ್ ಬೀಟ್ಸ್ ಸಂಸ್ಥೆ ವತಿಯಿಂದ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಿತು.

ಕಲಾವಿದರಾದ ಶ್ರೀಹರಿ ಹಾಗೂ ವಿನೀತ್ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀಮಂಗಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಳ್ಳಂಗಡ ಅಜಿತ್ ಪೂವಣ್ಣ, ಸದಸ್ಯ ಚೋನೀರ ಕಾಳಯ್ಯ, ಮಲಯಾಳಿ ಸಮಾಜ ಅಧ್ಯಕ್ಷ ಶರತ್‍ಕಾಂತ್, ಪ್ರಮುಖರಾದ ಮನು ಸೋಮಯ್ಯ, ಸುಬ್ರಮಣಿ, ವಿವಿ ಅರುಣ್‍ಕುಮಾರ್, ಮುರಳಿ, ಶಿನೋಜ್ ಪಾಲ್ಗೊಂಡು ಶುಭ ಹಾರೈಸಿದರು.