ಭಾಗಮಂಡಲ, ನ. 24: ದ್ವಿಚಕ್ರ ವಾಹನವೊಂದರಲ್ಲಿ ಬಂದಿರುವ ಅಪರಿಚಿತ ಯುವಕರಿಬ್ಬರು; ಅಂಗಡಿಯೊಂದರಲ್ಲಿ ಸಾಂಬಾರ ಪದಾರ್ಥ ವ್ಯಾಪಾರದÀ ಸೋಗಿನಲ್ಲಿ; ಒಂಟಿಯಾಗಿದ್ದ ಮಹಿಳೆಯ ಕೊರಳಿನ ಸರ, ಮೊಬೈಲ್ ಇತ್ಯಾದಿ ಕಸಿದುಕೊಂಡು ಪರಾರಿಯಾಗಿರುವ ದುಷ್ಕøತ್ಯವೊಂದು ಇಂದು ಹಾಡಹಗಲು ಭಾಗಮಂಡಲದಲ್ಲಿ ಸಂಭವಿಸಿದೆ.ಇಂದು ಅಪರಾಹ್ನ 3 ಗಂಟೆ ಸುಮಾರಿಗೆ ಭಾಗಮಂಡಲದಿಂದ ತಲಕಾವೇರಿಗೆ ತೆರಳುವ ಮಾರ್ಗದ ಬದಿಯಲ್ಲಿರುವ; ಪಿ.ಡಿ. ರವಿನ್ ಮುತ್ತಣ್ಣ ಅವರಿಗೆ ಸೇರಿದ ಅಂಗಡಿಯಲ್ಲಿ; ವ್ಯಾಪಾರದ ಸೋಗಿನಲ್ಲಿ ಇಬ್ಬರು ಅಪರಿಚಿತರು ಬಂದಿದ್ದಾರೆ. ಅಂಗಡಿಯಲ್ಲಿದ್ದ ವಸ್ತುಗಳನ್ನು ಖರೀದಿಸುವಂತೆ ನಟಿಸುವದರೊಂದಿಗೆ; ಒಂಟಿಯಾಗಿದ್ದ ಪೂಜಾ ಚೇತನ್ ಕೊರಳಿನ ಸರವನ್ನು ಕಸಿದುಕೊಂಡಿದ್ದಾರೆ.

ಮರುಕ್ಷಣದಲ್ಲಿ ಆಕೆಯ ಮೊಬೈಲ್ ಸೇರಿದಂತೆ ಇತರ ವಸ್ತುಗಳೊಂದಿಗೆ ಕೆಂಪು ಬಣ್ಣದ ಸ್ಕೂಟರ್‍ನಲ್ಲಿ ಪರಾರಿ ಯಾಗಿದ್ದಾರೆ. ಈ ದುಷ್ಕøತ್ಯದಿಂದ ಕಂಗಾಲಾಗಿರುವ ಪೂಜಾ ಅನತಿ ದೂರ ಕಾಲ್ನಡಿಗೆಯಲ್ಲಿ ಬಂದು ಇತರರಿಗೆ ವಿಷಯ ಮುಟ್ಟಿಸುವ ದರೊಂದಿಗೆ; ಭಾಗಮಂಡಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ದುಷÀ್ಕøತ್ಯ ಎಸಗಿರುವ ಆರೋಪಿಗಳಿಬ್ಬರು ಮೊದಲಿಗೆ ಬಂದು ಚಹಾಪುಡಿ ಇತ್ಯಾದಿ ಖರೀದಿಸಿದ್ದು; ಅಂಗಡಿಯಲ್ಲಿ ಪೂಜಾ ಒಬ್ಬೊಂಟಿಯಾಗಿ ಇರುವ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ. ಅಲ್ಲಿಂದ ಅನತಿ ದೂರ ತೆರಳಿ ಮತ್ತೆ ಹಿಂದಿರುಗಿ ಬಂದು ಇನ್ನಷ್ಟು ವಸ್ತುಗಳನ್ನು ಖರೀದಿಸುವಂತೆ ನಟಿಸುತ್ತಾ ಅಂಗಡಿಯೊಳಗೆ ನುಗ್ಗಿದ್ದಾರೆ.

ಮರುಕ್ಷಣ ಆಕೆಯ ಕೊರಳಿನ ಸರ ಹಾಗೂ ಮೊಬೈಲ್ ಕಸಿದುಕೊಂಡು ಸ್ಕೂಟರ್‍ನಲ್ಲಿ

(ಮೊದಲ ಪುಟದಿಂದ) ಪರಾರಿಯಾಗಿದ್ದು; ಪರಸ್ಪರ ಮಲೆಯಾಳಂನಲ್ಲಿ ಮಾತನಾಡುತ್ತಿ ದ್ದರೆಂದು ಗೊತ್ತಾಗಿದೆ. ಅಲ್ಲದೆ ಪತ್ತೆಯಾಗಿರುವ ಸ್ಕೂಟರ್ ಆರೋಪಿಗಳಿಗೆ ಸೇರಿದ್ದೇ ಅಥವಾ ಅದು ಕೂಡ ಕಳವು ಮಾಡಿರುವದೇ ಎಂಬ ಸಂಶಯ ಹುಟ್ಟಿಕೊಂಡಿದೆ.

ವಿಷಯ ತಿಳಿದ ಕೂಡಲೇ ಎಚ್ಚೆತ್ತುಕೊಂಡಿರುವ ಸಾರ್ವಜನಿಕರು ಚೇರಂಬಾಣೆಗೆ ಸುದ್ದಿ ರವಾನಿಸಿದ್ದಾರೆ. ಇತ್ತ ಪೊಲೀಸರು ಬಿರುಸಿನ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವೇಳೆ ಸರಗಳ್ಳರಿಬ್ಬರು ಸಂಬಂಧಿಸಿದ ವಾಹನದಲ್ಲಿ ಅತ್ತ ಬಂದಿದ್ದು; (ಮೊದಲ ಪುಟದಿಂದ) ಪರಾರಿಯಾಗಿದ್ದು; ಪರಸ್ಪರ ಮಲೆಯಾಳಂನಲ್ಲಿ ಮಾತನಾಡುತ್ತಿ ದ್ದರೆಂದು ಗೊತ್ತಾಗಿದೆ. ಅಲ್ಲದೆ ಪತ್ತೆಯಾಗಿರುವ ಸ್ಕೂಟರ್ ಆರೋಪಿಗಳಿಗೆ ಸೇರಿದ್ದೇ ಅಥವಾ ಅದು ಕೂಡ ಕಳವು ಮಾಡಿರುವದೇ ಎಂಬ ಸಂಶಯ ಹುಟ್ಟಿಕೊಂಡಿದೆ.

ವಿಷಯ ತಿಳಿದ ಕೂಡಲೇ ಎಚ್ಚೆತ್ತುಕೊಂಡಿರುವ ಸಾರ್ವಜನಿಕರು ಚೇರಂಬಾಣೆಗೆ ಸುದ್ದಿ ರವಾನಿಸಿದ್ದಾರೆ. ಇತ್ತ ಪೊಲೀಸರು ಬಿರುಸಿನ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವೇಳೆ ಸರಗಳ್ಳರಿಬ್ಬರು ಸಂಬಂಧಿಸಿದ ವಾಹನದಲ್ಲಿ ಅತ್ತ ಬಂದಿದ್ದು; ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರು ಈಗಷ್ಟೇ ಭಾಗಮಂಡಲ ಠಾಣೆಯಲ್ಲಿ ದೂರು ದಾಖಲಾಗಿದ್ದು; ದುಷ್ಕøತ್ಯವೆಸಗಿರುವ ಆರೋಪಿಗಳ ಪತ್ತೆಗೆ ಬಿರುಸಿನ ತನಿಖೆ ಕೈಗೊಳ್ಳಲಾಗಿದೆ. ಭಾಗಮಂಡಲದಲ್ಲಿ ಸಿಸಿ ಕ್ಯಾಮರಾ ನೀಡುವ ಸುಳಿವಿನ ಮೇರೆಗೆ ಮಾಹಿತಿ ಕಲೆಹಾಕ ಲಾಗುತ್ತಿದೆ ಎಂದು ತಿಳಿಸಿದ್ದಾರೆ. ಭಾಗಮಂಡಲ ಠಾಣಾಧಿಕಾರಿ ಮಹದೇವ್ ಹಾಗೂ ಸಿಬ್ಬಂದಿ ಚೇರಂಬಾಣೆ ಸುತ್ತಮುತ್ತ ಶೋಧ ಕಾರ್ಯ ಕೈಗೊಂಡಿದ್ದು; ಆರೋಪಿ ಗಳು ಇನ್ನಷ್ಟೇ ಪತ್ತೆಯಾಗಬೇಕಿದೆ.