ಮಡಿಕೇರಿ, ನ.22: ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ 112 ತುರ್ತು ಸ್ಪಂದನ ಸಹಾಯ ವ್ಯವಸ್ಥೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್ ಅವರು ಚಾಲನೆ ನೀಡಿದರು. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿ ಆವರಣದಲ್ಲಿರುವ ನಿಯಂತ್ರಣ ಕೊಠಡಿಯಲ್ಲಿ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು 112 ತುರ್ತು ಸ್ಪಂದನ ಸಹಾಯ ವ್ಯವಸ್ಥೆಯಿಂದ ದೇಶಾದ್ಯಂತ ಒಂದೇ ತುರ್ತು ಕರೆ ಸಂಖ್ಯೆ (112), ಧ್ವನಿ, ಎಸ್‍ಎಂಎಸ್, ಇ-ಮೇಲ್, 112 ಪೋರ್ಟಲ್ ಮತ್ತು ಪ್ಯಾನಿಕ್ ಆ್ಯಪ್ ಮೂಲಕ ತುರ್ತು ವಿನಂತಿ, ರಾಜ್ಯ ತುರ್ತು ಪ್ರತಿಕ್ರಿಯೆ ಕೇಂದ್ರದಿಂದ ಸೇವಾ ಸಮನ್ವಯ, ನಾಗರಿಕರಿಗೆ 24x7 ಕಾಲ ತುರ್ತು ಪ್ರತಿಕ್ರಿಯೆ ಬೆಂಬಲ ಸೇವೆಗಳು, ಸೇವಾ ವಿನಂತಿದಾರರ ಸ್ವಯಂಚಾಲಿತ ಸ್ಥಳ ಗುರುತಿಸುವಿಕೆ, ಪೊಲೀಸ್, ಅಗ್ನಿಶಾಮಕ ಮತ್ತು ವೈದ್ಯಕೀಯ ಸೇವೆಗಳಿಂದ ತ್ವರಿತ ಸಹಾಯ, ಹತ್ತಿರದ ತುರ್ತು ಸ್ಪಂದನ ವಾಹನಗಳ ಮೂಲಕ ವೇಗವಾಗಿ ಸಹಾಯಕ, ಸಮಯ

(ಮೊದಲ ಪುಟದಿಂದ) ಪ್ರಜ್ಞೆಯೊಂದಿಗೆ ಪರಿಸ್ಥಿತಿ ಆಧಾರಿತ ಸೂಕ್ತ ನಿರ್ಧಾರಗಳು, ಡಿಜಿಟಲ್ ನಕ್ಷೆಯಲ್ಲಿ ಸೇವಾ ವಿನಂತಿಗಳು ಮತ್ತು ತುರ್ತು ಸ್ಪಂದನ ವಾಹನಗಳ ನೇರ ಪತ್ತೆ, ಅಪರಾಧಗಳನ್ನು ಕಡಿಮೆ ಮಾಡಲು ಅಪರಾಧ ವಿಶ್ಲೇಷಣೆ ಮತ್ತು ಮುನ್ಸೂಚನೆ ಬೆಂಬಲ ಮತ್ತಿತರ ಅನುಕೂಲ ಪಡೆಯಬಹುದಾಗಿದೆ ಎಂದರು.

ಸ್ಮಾರ್ಟ್ ಪೋನ್‍ಗಳಲ್ಲಿ ಬಳಸಬಹುದಾದಂತಹ 112 ಇಂಡಿಯಾ ಅಫ್ಲಿಕೇಷನ್, ತೀವ್ರ ತುರ್ತು ಪರಿಸ್ಥಿತಿಯಲ್ಲಿ ಎಸ್‍ಒಎಸ್ ಸಿಗ್ನಲ್ ಅನ್ನು ಪ್ರಚೋದನೆ ಮಾಡಿ ತುರ್ತು ಸ್ಪಂದನಾ ಕೇಂದ್ರ, ರಕ್ತಸಂಬಂಧಿಗಳು ಮತ್ತು ಹತ್ತಿರದ ಸ್ವಯಂಸೇವಕರುಗಳಿಗೆ ತ್ವರಿತವಾಗಿ ಕಾರ್ಯೋನ್ಮುಖವಾಗುವಂತೆ ಎಚ್ಚರಿಸಲು ಸಹಾಯ ಮಾಡುತ್ತದೆ ಎಂದರು.

ಮಹಿಳೆಯರು ಮತ್ತು ಮಕ್ಕಳಿಗೆ ಸಹಾಯ ಮಾಡುವ ದೃಷ್ಟಿಯಿಂದ ಇದನ್ನು ವಿನ್ಯಾಸಗೊಳಿಸಲಾಗಿದೆ. ‘112’ ಇಂಡಿಯಾ ಅಫ್ಲಿಕೇಶನ್‍ನಿಂದ ಪ್ರಚೋದಿಸಲ್ಪಡುವ ಎಚ್ಚರಿಕೆಯು ಸೇವಾ ವಿನಂತಿಯ ಸ್ಥಳ ಮತ್ತು ವಿವರಗಳನ್ನು ಪ್ರದರ್ಶಿಸುವದಲ್ಲದೆ, ಸ್ವಯಂ ಸೇವಕರ ಸ್ಮಾರ್ಟ್ ಫೋನಿನಲ್ಲಿ ‘ಕೂಗು’ ಅಲಾರಂ ನುಡಿಸುವ ಮೂಲಕ ಗಮನ ಸೆಳೆಯುತ್ತದೆ ಎಂದು ಅವರು ವಿವರಿಸಿದರು.

ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ತುರ್ತು ಸೇವೆಗಳನ್ನು ಪಡೆಯಬಹುದು. ಫೋನಿನಿಂದ 112 ಡಯಲ್ ಮಾಡುವದು, ಪ್ಯಾನಿಕ್ ಆಲರ್ಟ್‍ಗಾಗಿ ಸಾಮಾನ್ಯ ಫೋನಿನಲ್ಲಿ ‘5’ ಅಥವಾ ‘9’ ಸಂಖ್ಯೆಯನ್ನು ಲಾಂಗ್ ಪ್ರೆಸ್ ಮಾಡುವದು. ಪ್ಯಾನಿಕ್ ಅಲರ್ಟ್‍ಗಾಗಿ ಸ್ಮಾರ್ಟ್ ಫೋನಿನಲ್ಲಿ ಪವರ್ ಬಟನ್ ಅನ್ನು 3 ಅಥವಾ 5 ಬಾರಿ ವೇಗವಾಗಿ ಪ್ರೆಸ್ ಮಾಡುವದು. ತಿತಿತಿ.ಞಚಿ.ಟಿeಡಿs.iಟಿ ಈ ಜಾಲತಾಣದ ಮೂಲಕ ವಿನಂತಿ ಕಳುಹಿಸುವದು. eಡಿss112ಞಣಞ@ಞsಠಿ.gov.iಟಿ ಇ-ಮೇಲ್ ಕಳುಹಿಸುವದು. 112 Iಟಿಜiಚಿ ಮೊಬೈಲ್ ಆ್ಯಪ್ ಮೂಲಕ ವಿನಂತಿ ಕಳುಹಿಸಬಹುದಾಗಿದೆ. ಡಿವೈಎಸ್‍ಪಿ ದಿನೇಶ್ ಕುಮಾರ್, ಐ.ಪಿ.ಮೇದಪ್ಪ, ರಾಚಯ್ಯ, ಪೊಲೀಸ್ ಅಧಿಕಾರಿಗಳು ಇತರರು ಇದ್ದರು.