ವೀರಾಜಪೇಟೆ, ನ. 22: ಅಪ್ರಾಪ್ತೆ ಯನ್ನು ಪ್ರೀತಿಸಿ ಮದುವೆಯಾಗು ವದಾಗಿ ನಂಬಿಸಿ ವಂಚನೆ ಮಾಡಿದ ಆರೋಪದ ಮೇರೆ ಪಣಿ ಎರವರ ಮಣಿ ಎಂಬಾತನಿಗೆ ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು ಭಾ.ದಂ.ಸಂ ವಿವಿಧ ಕಲಂಗಳ ಅಡಿಯಲ್ಲಿ ಒಟ್ಟು 63 ವರ್ಷ ಸಜೆ ಹಾಗೂ ರೂ. 70,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಕಳೆದ ತಾ: 18-6-2017 ರಂದು ಬಿರುನಾಣಿ ಗ್ರಾಮದ ಪಣಿ ಎರವರ ಮಣಿ ಎಂಬಾತ ಅಪ್ರಾಪ್ತ್ತ ಬಾಲಕಿ ಯನ್ನು ಪ್ರೀತಿಸುವದಾಗಿ ನಂಬಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು ಕೆಲವು ದಿನಗಳ ನಂತರ ಅರಣ್ಯದಲ್ಲಿ ಶೆಡ್ ನಿರ್ಮಿಸಿ ಜೊತೆಯಲ್ಲಿದ್ದು ಆಕೆ ಗರ್ಭಿಣಿಯಾದ ನಂತರ ತಾ.23.5.18 ರಂದು ಅಪ್ರಾಪ್ತೆಯ ಮನೆ ಬಳಿ ಬಿಟ್ಟು ತೆರಳಿದ್ದ ಈ ಬಗೆಗಿನ ದೂರಿನ ಮೇರೆ ಶ್ರೀಮಂಗಲ ಪೊಲೀಸರು ಆರೋಪಿ ಮಣಿ ವಿರುದ್ಧ ಭಾ.ದಂ.ಸಂ. 363, 376, 376(2) (ಐ)(ಎನ್), 376(2) (ಎಚ್) ಹಾಗೂ 6 ಪೋಕ್ಸೋ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಇಲ್ಲಿನ ಸೆಷನ್ಸ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 2ನೇ ಅಧಿಕ

(ಮೊದಲ ಪುಟದಿಂದ) ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು ಕಲಂ 376(2)(ಎನ್) ಅಡಿಯಲ್ಲಿ 20ವರ್ಷ ಸಜೆ ಹಾಗೂ 20,000 ದಂಡ, ದಂಡ ಪಾವತಿಗೆ ತಪ್ಪಿದರೆ ಒಂದು ವರ್ಷ ಸಜೆ, ಕಲಂ 376(2)(ಐ) ಕಾಯಿದೆಯಡಿಯಲ್ಲಿ 20ವರ್ಷ ಸಜೆ, ರೂ 20,000 ದಂಡ, ದಂಡ ಕಟ್ಟಲು ತಪ್ಪಿದರೆ ಒಂದು ವರ್ಷ ಸಜೆ ಹಾಗೂ ಕಲಂ 6ರ ಪೋಕ್ಸೋ ಕಾಯಿದೆ ಯಡಿಯಲ್ಲಿ 20 ವರ್ಷಗಳ ಸಜೆ ರೂ 20,000 ದಂಡ, ದಂಡ ಪಾವತಿಗೆ ತಪ್ಪಿದರೆ ಒಂದು ವರ್ಷ ಸಜೆ ಹಾಗೂ ಕಲಂ 363 ಭಾ.ದಂ.ಸಂ. ಅಡಿಯಲ್ಲಿ 3ವರ್ಷ ಸಜೆ ಹಾಗೂ ರೂ 10,000 ದಂಡ, ದಂಡ ಕಟ್ಟಲು ತಪ್ಪಿದರೆ 6ತಿಂಗಳ ಸಜೆ ಅನುಭವಿಸಬೇಕು. ಈ ಒಟ್ಟು ಮೂರು ಕಲಂ ಗಳಿಗೆ ತಲಾ 20ವರ್ಷ ಕೊನೆಗೆ 363ಕ್ಕೆ 3 ವರ್ಷ ಸೇರಿದಂತೆ ಒಟ್ಟು 63 ವರ್ಷಗಳ ಸಜೆಯನ್ನು ತಲಾ 20ವರ್ಷಗಳಂತೆ ಏಕ ಕಾಲದಲ್ಲಿ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದ್ದು ದಂಡದ ಹಣದಲ್ಲಿ ಅಪ್ರಾಪ್ತೆ ಸಂತ್ರಸ್ತಳಿಗೆ ರೂ 40,000ವನ್ನು ಪರಿಹಾರವಾಗಿ ನೀಡುವಂತೆ ಆದೇಶಿಸಲಾಗಿದೆ.

ಸರಕಾರದ ಪರ ಅಭಿಯೋಜಕ ರಾದ ಡಿ.ನಾರಾಯಣ ವಾದಿಸಿದರು.