ಗೋಣಿಕೊಪ್ಪ ವರದಿ, ನ. 23: ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಎ. ಡಿವಿಜನ್ ಹಾಕಿ ಲೀಗ್‍ನಲ್ಲಿ 10 ತಂಡಗಳು ಗೆಲುವು ಪಡೆದುಕೊಂಡಿವೆ. ನಾಪೋಕ್ಲು ಶಿವಾಜಿ ತಂಡವು ಮರ್ಕರಾ ಯುನೈಟೆಡ್ ವಿರುದ್ದ 2-0 ಗೋಲುಗಳ ಜಯ ಸಾಧಿಸಿತು. ಶಿವಾಜಿ ಪರ 16 ನೇ ನಿಮಿಷದಲ್ಲಿ ಶುಭಂ, 18 ರಲ್ಲಿ ವಿಕಾಸ್ ಗೋಲು ಹೊಡೆದರು.

ಬೇಗೂರು ಈಶ್ವರ ಯೂತ್ ಕ್ಲಬ್ ತಂಡವು ಹಾತೂರು ಯೂತ್ ಕ್ಲಬ್ ತಂಡವನ್ನು 8-0 ಗೋಲುಗಳಿಂದ ಮಣಿಸಿತು. ಬೇಗೂರು ಪರ 13, 14 ರಲ್ಲಿ ಮಣಿ, 23, 27 ರಲ್ಲಿ ನಿಲನ್, 29 ರಲ್ಲಿ ದೀಪಕ್, 30 ರಲ್ಲಿ ಅಯ್ಯಮ್ಮ, 33, 24 ರಲ್ಲಿ ದೀಪಕ್ ಗೋಲು ಹೊಡೆದರು.

ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡವು ಟಾಟಾ ಕಾಫಿ ತಂಡವನ್ನು 4-2 ಗೋಲುಗಳಿಂದ ಸೋಲಿಸಿತು. ಕೂಡಿಗೆ ಪರ 8, 33 ರಲ್ಲಿ ವಿನಾಯಕ್, 22 ರಲ್ಲಿ ರಾಹುಲ್, 28 ರಲ್ಲಿ ಅಜಯ್, ಟಾಟಾ ಕಾಫಿ ಪರ 17 ರಲ್ಲಿ ಕಿರಣ್, 28 ರಲ್ಲಿ ಕಾರ್ಯಪ್ಪ ಗೋಲು ಹೊಡೆದರು.

ಚಾರ್ಮರ್ಸ್ ತಂಡವು ಮಲೆನಾಡ್ ವಿರುದ್ದ 3-2 ಗೋಲುಗಳ ಜಯ ಸಾಧಿಸಿತು. ಚಾರ್ಮರ್ಸ್ ಪರ 30 ರಲ್ಲಿ ಪೊನ್ನಣ್ಣ, 33 ರಲ್ಲಿ ನಾಣಯ್ಯ, 39 ರಲ್ಲಿ ವಿನಯ್, ಮಲೆನಾಡ್ ಪರ 10 ರಲ್ಲಿ ದೀಪಕ್, 29 ರಲ್ಲಿ ನಿರನ್ ತಿಮ್ಮಯ್ಯ ತಲಾ ಒಂದೊಂದು ಗೋಲು ಹೊಡೆದರು.

ಬೊಟ್ಯತ್ನಾಡ್ ತಂಡವು 3-1 ಗೋಲುಗಳಿಂದ ಬಲಮುರಿ ತಂಡವನ್ನು ಮಣಿಸಿತು. ಬೊಟ್ಯತ್ನಾಡ್ ಪರ 29 ನೇ ನಿಮಿಷದಲ್ಲಿ ಪೊನ್ನಣ್ಣ, 36 ರಲ್ಲಿ ಪ್ರಜ್ವಲ್, 39 ರಲ್ಲಿ ಬೋಪಣ್ಣ, ಬಲಮುರಿ ಪರ 27 ರಲ್ಲಿ ಬೋಪಯ್ಯ ಗೋಲು ಬಾರಿಸಿದರು.

ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್ ಹಾಗೂ ಕೋಣನಕಟ್ಟೆ ಇಲೆವೆನ್ ತಂಡಗಳ ನಡುವಿನ ಪಂದ್ಯ 2-2 ಗೋಲುಗಳ ಡ್ರಾ ಫಲಿತಾಂಶ ಕಂಡಿತು. ಅಮ್ಮತ್ತಿ ಪರ 13 ರಲ್ಲಿ ದಿಲನ್, 14 ರಲ್ಲಿ ಚೆಂಗಪ್ಪ, ಕೋಣನಕಟ್ಟೆ ಪರ 9 ರಲ್ಲಿ ಯಶ್ವಿನ್, 28 ರಲ್ಲಿ ದೀಪಕ್ ತಲಾ ಒಂದೊಂದು ಗೋಲು ಹೊಡೆದರು.

ಕೋಣನಕಟ್ಟೆ ಇಲೆವೆನ್ ತಂಡವು ಮರ್ಕರಾ ಯುನೈಟೆಡ್ ವಿರುದ್ದ 2-0 ಗೋಲುಗಳಿಂದ ಜಯಿಸಿತು. ಕೋಣಕಟ್ಟೆ ಪರ 16 ನೇ ನಿಮಿಷದಲ್ಲಿ ಬಿದ್ದಪ್ಪ, 37 ರಲ್ಲಿ ವಿಪನ್ ತಲಾ ಒಂದೊಂದು ಗೋಲು ಹೊಡೆದರು.

ಬಲಮುರಿ ಮಹಾದೇವ ಸ್ಪೋಟ್ರ್ಸ್ ಕ್ಲಬ್ ತಂಡವು ಹಾತೂರು ಯೂತ್ ಕ್ಲಬ್ ತಂಡವನ್ನು 7-1 ಗೋಲುಗಳಿಂದ ಮಣಿಸಿತು. ಬಲಮುರಿ ಪರ 26, 36, 39 ನೇ ನಿಮಿಷಗಳಲ್ಲಿ ಬೋಪಯ್ಯ, 12, 21 ರಲ್ಲಿ ಬೋಪಣ್ಣ, 6 ರಲ್ಲಿ ಜೋಯಪ್ಪ, 21 ರಲ್ಲಿ ವಿನೋದ್, ಹಾತೂರು ಪರ 35 ರಲ್ಲಿ ಅಣ್ಣಯ್ಯ ಗೋಲು ಹೊಡೆದರು.

ನಾಪೋಕ್ಲು ಶಿವಾಜಿ ತಂಡವು ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್ ತಂಡದ ವಿರುದ್ದ 5-0 ಗೋಲುಗಳ ಗೆಲುವು ಪಡೆಯಿತು. 4, 17 ರಲ್ಲಿ ನಾಚಪ್ಪ, 32, 33 ರಲ್ಲಿ ರತನ್, 26 ರಲ್ಲಿ ಕಾಳಪ್ಪ, 32 ರಲ್ಲಿ ಕಾರ್ಯಪ್ಪ ಗೋಲು ಭಾರಿಸಿ ಮಿಂಚಿದರು. ಮಲೆನಾಡ್ ತಂಡಕ್ಕೆ ಟಾಟಾ ಕಾಫಿ ವಿರುದ್ದ 2-1 ಗೋಲುಗಳ ಜಯ ಲಭಿಸಿತು. ಮಲೆನಾಡ್ ಪರ 7 ರಲ್ಲಿ ತಿಮ್ಮಯ್ಯ, 30 ರಲ್ಲಿ ನೀಲ್, ಟಾಟಾ ಪರ 32 ರಲ್ಲಿ ಕಾರ್ಯಪ್ಪ ತಲಾ ಒಂದೊಂದು ಗೋಲು ಹೊಡೆದರು.

ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡವು ಪೊದ್ದಮಾನಿ ತಂಡವನ್ನು 5-2 ಗೋಲುಗಳಿಂದ ಸೋಲಿಸಿತು. ಪೊನ್ನಂಪೇಟೆ ಪರ 3, 9 ನೇ ನಿಮಿಷಗಳಲ್ಲಿ ದೃವನ್, 5 ರಲ್ಲಿ ಬಿಪಿನ್, 10 ರಲ್ಲಿ ಎಂ.ಬಿ. ನಾಚಪ್ಪ, 24 ರಲ್ಲಿ ವಚನ್, ಪೊದ್ದಮಾನಿ ಪರ 8 ರಲ್ಲಿ ದಿಲನ್, 15 ರಲ್ಲಿ ಪ್ರಗತ್ ಗೋಲು ಹೊಡೆದರು.

ಬೇಗೂರು ಈಶ್ವರ ಯೂತ್ ಕ್ಲಬ್ ಮತ್ತು ಬೊಟ್ಯತ್ನಾಡ್ ತಂಡಗಳ ನಡುವಿನ ಪಂದ್ಯ 1-1 ಗೋಲುಗಳ ಡ್ರಾ ಫಲಿತಾಂಶ ನೀಡಿತು. ಬೇಗೂರು ಪರ 18 ರಲ್ಲಿ ಕಾರ್ಯಪ್ಪ, ಬೊಟ್ಯತ್ನಾಡ್ ಪರ 8 ರಲ್ಲಿ ಕೆ.ಜಿ. ಬೋಪಣ್ಣ ಗೋಲು ಹೊಡೆದರು. - ಸುದ್ದಿಮನೆ