ಕೂಡಿಗೆ, ನ. 22: ಕೂಡುಮಂಗಳೂರು ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಯು ಸಂದ ಹಿನ್ನೆಲೆ ಹಾಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಗ್ರಾ.ಪಂ.ನ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ಗ್ರಾ.ಪಂ.ಗೆ 2018ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಬರಲು ಕಾರಣರಾದ ಪೌರ ಕಾರ್ಮಿಕರಿಗೆ ಸನ್ಮಾನಿಸುವದರ ಜೊತೆಗೆ, ಸಹಕಾರ ಮಾಡಿದ ಗ್ರಾ.ಪಂ.ನ ಸದಸ್ಯರಿಗೆ, ಆ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ, ಅಂಗನವಾಡಿಗಳಿಗೆ, ಆಶಾ ಕಾರ್ಯಕರ್ತರಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ಗಾಂಧೀಜಿಯವರ ಮೂರ್ತಿಯನ್ನು ನೆನಪಿನ ಕಾಣಿಕೆ ನೀಡಿ ಗ್ರಾ.ಪಂ. ವತಿಯಿಂದ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಿ ವಹಿಸಿದ್ದರು. ‘ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯೆ ಮಂಜುಳಾ, ತಾ.ಪಂ. ಸದಸ್ಯ ಗಣೇಶ್, ಗ್ರಾ.ಪಂ. ಉಪಾಧ್ಯಕ್ಷ ಕೆ.ವಿ.ಸಣ್ಣಪ್ಪ, ಸದಸ್ಯರಾದ ಫಿಲೋಮಿನಾ, ಸಾವಿತ್ರಿರಾಜು, ರಮೇಶ್, ಮಂಜುನಾಥ್, ಮಹೇಶ್‍ಕಾಳಪ್ಪ, ಪ್ರಕಾಶ್, ಪಾರ್ವತಮ್ಮ ರಾಮೇಗೌಡ, ಬಾಸ್ಕರ್‍ನಾಯಕ್, ಜ್ಯೋತಿ ಪ್ರಮೀಳಾ, ಕೆ.ಟಿ. ಮಂಜುನಾಥ್, ಜ್ಯೋತಿ ಮಂಜುನಾಥ್, ಜಯಮ್ಮ, ಈರಪ್ಪ, ಶ್ರೀನಿವಾಸ್, ನಬಿಯಾ ಸೇರಿದಂತೆ ಸದಸ್ಯರು ಹಾಗೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಯೆಷಾ, ಕಾರ್ಯದರ್ಶಿ ಮಾದಪ್ಪ, ಗ್ರಾ.ಪಂ. ಸಿಬ್ಬಂದಿಗಳು ಮತ್ತಿತರರು ಇದ್ದರು