ಶ್ರೀಮಂಗಲ, ನ. 22: ಕೊಡಗಿನ ಬಹುತೇಕ ಶಿಕ್ಷಣ ಸಂಸ್ಥೆಗಳು ದಾನಿಗಳು ನೀಡಿದ ಜಾಗದ ಸಹಾಯದಿಂದ ಸ್ಥಾಪನೆಯಾಗಿದೆ. ಹಿರಿಯರ ದೂರದೃಷ್ಟಿಯೊಂದಿಗೆ ಪರೋಪಕಾರ ಭಾವನೆಯಿಂದ ಮಕ್ಕಳಿಗೆ ಪೂರಕ ಶಿಕ್ಷಣ ದೊರೆಯುತ್ತಿದೆ. ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ಅಭಿಪ್ರಾಯಪಟ್ಟರು. ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ನಡೆಯುತ್ತಿರುವ ಅಪ್ಪಚ್ಚಕವಿ ವಿದ್ಯಾಸಂಸ್ಥೆಗೆ 25 ವರ್ಷ ಸಂದ ಪ್ರಯುಕ್ತ ರಜತಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
1994ರಲ್ಲಿ ಚಿಕ್ಕ ಕೊಠಡಿಯಲ್ಲಿ ಸ್ಥಾಪನೆಯಾದ ವಿದ್ಯಾಸಂಸ್ಥೆ ಇದೀಗ ದೊಡ್ಡದಾಗಿ ಬೆಳೆದು ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿರುವದು ಹೆಮ್ಮೆಯ ವಿಷಯ. ಮಕ್ಕಳನ್ನು ಸಂಸ್ಕøತಿಯುತ ಶಿಕ್ಷಣದಿಂದ ಒಳ್ಳೆಯ ವಿದ್ಯಾರ್ಥಿಯಾಗಿ ರೂಪಿಸಿ ಸತ್ಪ್ರಜೆಯಾಗಿಸಲು ಶಿಕ್ಷಕರ ಪಾತ್ರ ದೊಡ್ಡದಾಗಿದೆ ಎಂದು ಹೇಳಿದರು.
ಮತ್ತೊರ್ವ ಮುಖ್ಯ ಅತಿಥಿ ವಿಧಾನಪರಿಷತ್ ಸದಸ್ಯ ಮಂಡೇಪಂಡ ಸುನಿಲ್‍ಸುಬ್ರಮಣಿ ಅವರು; ನೂತನವಾಗಿ ರೂ. 20 ಲಕ್ಷ ವೆಚ್ಚದಲ್ಲಿ ಬೆಳ್ಳಿಹಬ್ಬದ ನೆನಪಿಗೆ ನಿರ್ಮಿಸಿದ ಕಲಾಮಂದಿರವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾಸಂಸ್ಥೆಯನ್ನು ಹಿರಿಯರ ಶ್ರಮದಿಂದ ನಿರ್ಮಿಸಲಾಗಿದ್ದು ಅವರ ಕೊಡುಗೆಯನ್ನು ಈ ಸಂದರ್ಭ ನೆನಸಿಕೊಳ್ಳುವ ಮೂಲಕ ಗೌರವಿಸಲಾಗಿದೆ. ಬಹುತೇಕ ಕಡೆ ಹಿರಿಯರ ಕೊಡುಗೆಯನ್ನು ಸಂಸ್ಥೆ ಬೆಳೆದ ನಂತರ ಮರೆತು ಹೋಗುತ್ತಾರೆ, ಮಕ್ಕಳು ಮೊಬೈಲ್‍ಗಳ ದಾಸರಾಗಿ ತಾಯಿ-ತಂದೆ, ಒಡಹುಟ್ಟಿದವರ ಸಂಬಂಧಗಳನ್ನು ಮರೆತು ಹೋಗಬಾರದು. ಕೊಡಗಿನ ಘನತೆ, ಗೌರವ ಕಾಪಾಡುವ ಮೂಲಕ ದೇಶದ ಉತ್ತಮ ಸತ್ಪ್ರಜೆಯಾಗಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೇಕ್‍ಮಾಡ ರಾಜೀವ್‍ಬೋಪಯ್ಯ ಮಾತನಾಡಿ ಒಬ್ಬ ವ್ಯಕ್ತಿ ಒಳ್ಳೆಯದಾಗಿ ಬೆಳೆದರೆ ಆ ಮನೆ, ಸಮಾಜ ಹಾಗೂ ದೇಶ ಒಳ್ಳೆಯದಾಗಿರುತ್ತದೆ. ಆದ್ದರಿಂದ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಣದ ಪಾತ್ರ ಹಿರಿಯದಾಗಿದ್ದು, ಈ ನಿಟ್ಟಿನಲ್ಲಿ ಅಪ್ಪಚ್ಚಕವಿ ವಿದ್ಯಾಸಂಸ್ಥೆ ಪರಿಪೂರ್ಣ ಶಿಕ್ಷಣ ನೀಡುತ್ತಿದೆ ಎಂದರು.
ವಿಧಾನಪರಿಷತ್ ಸದಸ್ಯ ಸುನಿಲ್‍ಸುಬ್ರಮಣಿಯವರು ಪೊನ್ನಂಪೇಟೆ ಕೊಡವ ಸಮಾಜಕ್ಕೆ ಈಗಾಗಲೇ ರೂ. 5 ಲಕ್ಷ ಅನುದಾನವನ್ನು ನೀಡಿದ್ದು, ಇದನ್ನು ವಿದ್ಯಾಸಂಸ್ಥೆ ಅಥವಾ ಕೊಡವ ಸಮಾಜಕ್ಕೆ ಅಗತ್ಯ ಇರುವಲ್ಲಿಗೆ ಬಳಸಿಕೊಳ್ಳುವಂತೆ ಹೇಳಿದ್ದಾರೆಂದು ವಿವರಿಸಿದರು.
ಪಠ್ಯಕ್ರಮ ಅನುಷ್ಠಾನಕ್ಕೆ ಸಲಹೆ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕÀ ಪಿ.ಎಸ್. ಮಚ್ಚಾಡೋ ಕೊಡವ ಭಾಷೆಯನ್ನು ಮೂರನೇ ಭಾಷೆಯಾಗಿ ವ್ಯಾಸಂಗ ಮಾಡಲು ಈಗಾಗಲೇ ಸರಕಾರದ ಆದೇಶದ ಪ್ರಕಾರ ಅವಕಾಶವಿದೆ. ಕೊಂಕಣಿ-ತುಳು ಭಾಷೆ ಮೂರನೇ ಭಾಷೆಯಾಗಿ ಕೆಲವು ಶಾಲೆಗಳಲ್ಲಿ ಅಧ್ಯಯನವಾಗುತ್ತಿದೆ. ಈ ನಿಟ್ಟಿನಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿರುವ ಅಪ್ಪಚ್ಚಕವಿ ವಿದ್ಯಾಸಂಸ್ಥೆ ಮೂರನೇ ಭಾಷೆಯಾಗಿ ಕೊಡವ ಪಠ್ಯಕ್ರಮವನ್ನು ಜಾರಿಗೆ ತರಲು ಮುಂದಾದರೆ ಈ ನಿಟ್ಟಿನಲ್ಲಿ ಪಠ್ಯಪುಸ್ತಕ ರಚನೆ ಮಾಡಬೇಕಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಮಾತನಾಡಿ ಮೂರನೇ ಭಾಷೆಯಾಗಿ ಕೊಡವ ಭಾಷೆಯನ್ನು ಪಠ್ಯಕ್ರಮವಾಗಿ ತರಲು ಸರಕಾರದ ಆದೇಶ ಇರುವುದರಿಂದ ಪಠ್ಯಪುಸ್ತಕ ರಚಿಸಬೇಕಾಗುತ್ತದೆ. ಸರಕಾರದ ಆದೇಶದಂತೆ ಕೊಡವ ಭಾಷೆಯನ್ನು ಪಠ್ಯಕ್ರಮಕ್ಕೆ ತರುವದು ಕೊಡವ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಹಿರಿಯರಿಗೆ ಗೌರವ
25 ವರ್ಷದ ಹಿಂದೆ ಅಪ್ಪಚ್ಚಕವಿ ವಿದ್ಯಾಸಂಸ್ಥೆ ಸ್ಥಾಪಿಸಲು ಶ್ರಮಿಸಿದ ಮತ್ತು ನಂತರದಲ್ಲಿ ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ಕಾರಣಕರ್ತರಾದ ಪೊನ್ನಂಪೇಟೆ ಕೊಡವ ಸಮಾಜ ಹಾಗೂ ಅಪ್ಪಚ್ಚಕವಿ ವಿದ್ಯಾಸಂಸ್ಥೆಯ ಪೂರ್ವಾಧ್ಯಕ್ಷರಾದ ಹಿರಿಯರನ್ನು ಈ ಸಂದರ್ಭ ಗೌರವಿಸಲಾಯಿತು.
ಮದ್ರೀರ ಕೆ.ಸೋಮಯ್ಯ, ಅಲೇಮಾಡ ಎ.ಶ್ರೀನಿವಾಸ್, ಅಡ್ಡಂಡ ಸಿ.ಕಾರ್ಯಪ್ಪ, ಚಿರಿಯಪಂಡ ರಾಜನಂಜಪ್ಪ, ಚಿರಿಯಪಂಡ ಕೆ.ಕಾಶಿಯಪ್ಪ, ಚೆಪ್ಪುಡಿರ ಕೆ.ಹ್ಯಾರಿದೇವಯ್ಯ, ಚೆಪ್ಪುಡಿರ ಎಂ.ಪೊನ್ನಪ್ಪ, ಸುಳ್ಳಿಮಾಡ ಪಿ.ಗೋಪಾಲತಿಮ್ಮಯ್ಯ, ಪುಚ್ಚಿಮಾಡ ಟಿ.ಲಾಲಪೂಣಚ್ಚ, ಪೆಮ್ಮಂಡ ಜೆ.ಪೊನ್ನಮ್ಮ, ಮನೆಯಪಂಡ ಎಸ್.ಅಪ್ಪಯ್ಯ, ಕಾಟಿಮಾಡ ಜಿಮ್ಮಿಅಣ್ಣಯ್ಯ, ಪೊನ್ನೀಮಾಡ ಎಸ್.ಸುರೇಶ್, ಮಲ್ಚೀರ ಆಶಾಗಣೇಶ್, ಕಾಳಿಮಾಡ ಮೋಟಯ್ಯ, ಅಲ್ಲದೆ, ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಈಗ ಮರಣಪಟ್ಟಿರುವ ಕೋಳೆರ ಎ.ಗೋಕುಲ, ಅಡ್ಡಂಡ ಸಿ.ಕಾಶಿ ಅವರ ಕೊಡುಗೆಯನ್ನು ಸ್ಮರಿಸಿ ಕಿರುಕಾಣಿಕೆ ನೀಡಿ ಗೌರವಿಸಲಾಯಿತು.
‘ರಜತವೈಭವ’ ಸಂಚಿಕೆ
ಅಪ್ಪಚ್ಚಕವಿ ವಿದ್ಯಾಸಂಸ್ಥೆಯ ಬೆಳ್ಳಿಹಬ್ಬದ ನೆನಪಿಗಾಗಿ ಹೊರತರಲಾದ ಸಂಚಿಕೆ ‘ರಜತವೈಭವ’ವನ್ನು ಬಿಡುಗಡೆ ಮಾಡಿದರು. ಸಭೆಯ ಆರಂಭದಲ್ಲಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಮಂಡಚಂಡ ದಿನೇಶ್‍ಚಿಟ್ಟಿಯಪ್ಪ ಸ್ವಾಗತಿಸಿದರು, ವಿದ್ಯಾಸಂಸ್ಥೆಯ ಅಧ್ಯಕ್ಷೆ ಮಲ್ಚೀರ ಆಶಾಗಣೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮೂಕಳಮಾಡ ಅರಸುನಂಜಪ್ಪ ವಂದಿಸಿದರು. ಈ ಸಂದರ್ಭ ಪೊನ್ನಂಪೇಟೆ ಕೊಡವ ಸಮಾಜದ ಉಪಾಧ್ಯಕ್ಷ ಚೆಪ್ಪುಡೀರ ಪಿ.ಬೋಪಣ್ಣ, ಜಂಟಿ ಕಾರ್ಯದರ್ಶಿ ಅಪ್ಪಂಡೇರಂಡ ಶಾರದ, ಖಜಾಂಚಿ ಮೂಕಳೇರ ಲಕ್ಷ್ಮಣ, ಶಾಶ್ವತ ಆಹ್ವಾನಿತ ನಿರ್ದೇಶಕ ಚೆಪ್ಪುಡಿರ ಕಿಟ್ಟುಅಯ್ಯಪ್ಪ, ನಿರ್ದೇಶಕರುಗಳಾದ ಮಲ್ಲಮಾಡ ಪ್ರಭುಪೂಣಚ್ಚ, ಅಡ್ಡಂಡ ಸುನಿಲ್‍ಸೋಮಯ್ಯ, ಚೆಪ್ಪುಡೀರ ರಾಕೇಶ್‍ದೇವಯ್ಯ, ಚೆಪ್ಪುಡಿರ ರೂಪಉತ್ತಪ್ಪ, ಚೊಟ್ಟೆಕಾಳಪಂಡ ಆಶಾಪ್ರಕಾಶ್ ಹಾಜರಿದ್ದರು.