ನಾಪೆÇೀಕ್ಲು, ನ. 22: ನಾಪೆÇೀಕ್ಲು ಲಯನ್ಸ್ ಕ್ಲಬ್ ವತಿಯಿಂದ ನಾಪೆÇೀಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಂಗಾಂಗ ದಾನ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಪಟ್ಟಣದ ದಂತ ವೈದ್ಯ ಕೇಲೇಟಿರ ಬೋಪಣ್ಣ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಾನವನ ಆಕಸ್ಮಿಕ ಮರಣದ ಸಂದರ್ಭದಲ್ಲಿ ಅವರ ಅಮೂಲ್ಯವಾದ ಅಂಗಾಂಗಗಳು ಮಣ್ಣು ಪಾಲಾಗುತ್ತದೆ. ಅದನ್ನು ಇತರರಿಗೆ ದಾನ ಮಾಡುವದರ ಮೂಲಕ ಅವರ ಬದುಕಿಗೆ ಆಸರೆಯಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್‍ನ ಅಧ್ಯಕ್ಷ ಚೌರೀರ ಉದಯ, ಪದಾಧಿಕಾರಿಗಳಾದ ಮುಕ್ಕಾಟಿರ ಎಂ.ವಿನಯ್, ಕಲಿಯಂಡ ಬಿ.ಕಾಳಪ್ಪ, ಬೊಳ್ಳಂಡ ಶ್ಯಾಮ್ ಬಿದ್ದಪ್ಪ, ಕೇಟೋಳಿರ ಕುಟ್ಟಪ್ಪ, ಎಳ್ತಂಡ ಬೋಪಣ್ಣ, ಕಲಿಯಂಡ ಇಂದಿರಾ ಅಯ್ಯಣ್ಣ, ಮತ್ತಿತರರು ಇದ್ದರು.