ಕುಶಾಲನಗರ, ನ. 23: ಕುಶಾಲನಗರ ಗಣಪತಿ ದೇವಾಲಯ ರಥೋತ್ಸವ ಅಂಗವಾಗಿ ನಡೆದ 99ನೇ ಗೋಪ್ರದರ್ಶನದಲ್ಲಿ ಪಾಲ್ಗೊಂಡ ರಾಸುಗಳ ಮಾಲೀಕರಿಗೆ ದೇವಾಲಯ ಸಮಿತಿಯಿಂದ ಬಹುಮಾನ ವಿತರಣೆ ನಡೆಯಿತು. ಕುಶಾಲನಗರ ಸೇರಿದಂತೆ ನೆರೆಯ ಅರಕಲಗೂಡು, ಪಿರಿಯಾಪಟ್ಟಣ ಭಾಗದಿಂದ ಗೋವುಗಳು, ಸಾಕುಪ್ರಾಣಿಗಳನ್ನು ಪ್ರದರ್ಶನಕ್ಕೆ ತಂದಿದ್ದರು.

ವಿಜೇತರ ವಿವರ: ಬಾಯಿಕೂಡಿದ ಜೋಡಿ ಹಳ್ಳಿಕಾರ್ ಎತ್ತುಗಳು ಪ್ರಥಮ ಪ್ರದೀಪ್ ಕುಮಾರ್ ಅರಕಲಗೂಡು, ಸಿದ್ದರಾಮ ಚಿಕ್ಕಹೊಸೂರು ದ್ವಿತೀಯ, ಹಾಲುಹಲ್ಲಿನ ಜೋಡಿ ಹಳ್ಳಿಕಾರ್ ಬೀಜದ ಹೋರಿ ಪ್ರಥಮ ಸ್ವಾಮಿ ಹಳಗೋಟೆ, ದ್ವಿತೀಯ ಎಚ್.ಟಿ. ಜಗದೀಶ್ ಹೆಬ್ಬಾಲೆ, ಪ್ರಜ್ವಲ್ ಚನ್ನಕೇಶವಪುರ, ಸಮಧಾನಕಾರ ಅಪ್ಪಾಜಿ ಹೆಬ್ಬಾಲೆ, ಎರಡು ಹಲ್ಲಿನ ಜೋಡಿ ಹಳ್ಳಿಕಾರ್ ಬೀಜದ ಹೋರಿ ಪ್ರಥಮ ವಸಂತ ಶಿರಂಗಾಲ, ನಾಲ್ಲು ಹಲ್ಲಿನ ಜೋಡಿ ಹಳ್ಳಿಕಾರ್ ಬೀಜದ ಹೋರಿ ಜಗದೀಶ್ ಪಟೇಲ್ ಹೆಬ್ಬಾಲೆ, ಆರು ಹಲ್ಲಿನ ಜೋಡಿ ಹಳ್ಳಿಕಾರ್ ಬೀಜದ ಹೋರಿ ಪ್ರಥಮ ಎಸ್.ಆರ್.ಪುಟ್ಟಪ್ಪ ಶಿರಂಗಾಲ, ಬಾಯಿಗೂಡಿದ ಹಳ್ಳಿಕಾರ್ ಬೀಜದ ಹೋರಿ ಪ್ರಥಮ ಶ್ರೀನಿವಾಸ್ ಹೆಬ್ಬಾಲೆ, ಮಿಶ್ರತಳಿ ಜೋಡಿ ಎತ್ತುಗಳು ಪ್ರಥಮ ರಾಜಾಚಾರಿ ಕೂಡ್ಲೂರು, ದ್ವಿತೀಯ ಹರಿಶ್ ಅಂಬಾಲಾರೆ, ತೃತೀಯ ಸದಾಶಿವ ಅವರ್ತಿ, ಹಾಲು ಹಲ್ಲಿನ ಜೋಡಿ ಹಳ್ಳಿಕಾರ್ ಕರುಗಳು ಪ್ರಥಮ ಶರತ್ ಅಂಬಲಾರೆ, ದ್ವಿತೀಯ ಕುಮಾರ್ ಹುಲುಸೆ, ತೃತೀಯ ನಟರಾಜ್ ಕೂಡ್ಲೂರು, ಸಮಧಾನಕರ ಬಹುಮಾನ ಜವರೇಗೌಡ ಕೂಡ್ಲೂರು, ಎರಡು ಹಲ್ಲಿನ ಜೋರಿ ಹಳ್ಳಿಕಾರ್ ಕರುಗಳು ಪ್ರಥಮ ಲೋಕೇಶ್ ಚಪ್ಪರದಹಳ್ಳಿ,ದ್ವಿತೀಯ ನಟೇಶ್ ಹಾರ್ನಹಳ್ಳಿ, ತೃತೀಯ ರುದ್ರಪ್ಪ ತೊರೆನೂರು, ಆರು ಹಲ್ಲಿನ ಜೋಡಿ ಹಳ್ಳಿಕಾರ್ ಕರುಗಳು ಪ್ರಥಮ ಅಭಿಲಾಷ್ ಚಿಕ್ಕಹಣಸೋಗೆ, ದ್ವಿತೀಯ ಸಿ.ಎಲ್.ಗಣೇಶ್ ಚಪ್ಪರದಹಳ್ಳಿ, ತೃತೀಯ ಕುಮಾರ್ ಕೋಮಲಾಪುರ, ಸಮಧಾನಕರ ಹೇಮಂತ್ ಕುಮಾರ್, ಎಮ್ಮೆ ಗಿರಿಪ್ರಸಾದ್ ಕೂಡ್ಲೂರು, ಜರ್ಸಿಮಿಶ್ರಿತ ಹಸುಗಳು ಪ್ರಥಮ ಚಾಯಾದೇವಿ ಅವರ್ತಿ, ದ್ವಿತೀಯ ಜಯಣ್ಣ ಅವರ್ತಿ, ತೃತೀಯ ತ್ರಿನೇಶ್ ಅವರ್ತಿ, ಸಮಧಾನಕರ ವರ್ಷಿತ ಅವರ್ತಿ, ಹೈಬ್ರೀಡ್ ಮಿಶ್ರತಳಿ ಹಸುಗಳು ಪ್ರಥಮ ಮಹೇಂದ್ರ ಮುಳ್ಳುಸೋಗೆ, ದ್ವಿತೀಯ ಪ್ರಕಾಶ್ ಶಿರಂಗಾಲ, ತೃತೀಯ ಮಂಜುನಾಥ್ ಶಿರಂಗಾಲ, ಸಮಧಾನಕರ ಸಹದೇವ್ ಕೂಡ್ಲೂರು, ಜೋಡಿ ಹಳ್ಳಿಕಾರ್ ಕಡಸುಗಳು ಪ್ರಥಮ ಅನಿಲ್ ಕುಮಾರ್ ಮಿರ್ಲೆ, ದ್ವಿತೀಯ ನಟೇಶ್ ಚಪ್ಪರದಹಳ್ಳಿ, ತೃತೀಯ ನಂದೀಶ್, ಸಮಧಾನಕರ ನಂಜುಂಡಚಾರಿ ಹೆಬ್ಬಾಲೆ, ಹಾಲು ಕುಡಿಯುವ ಹಳ್ಳಿಕಾರ್ ಕರುಗಳು ಪ್ರಥಮ ಚನ್ನಬಸಪ್ಪ ಬೆಳಗನಹಳ್ಳಿ, ದ್ವಿತೀಯ ಪ್ರಜ್ವಲ್ ಚನ್ನಕೇಶವಪುರ, ತೃತೀಯ ಎಚ್.ಡಿ.ರಾಜು ಹೆಬ್ಬಾಲೆ, ಬೀಜದ ಕೋಣ ಪ್ರಥಮ ಎಸ್.ಆರ್.ಪುಟ್ಟಪ್ಪ ಶಿರಂಗಾಲ, ಮಿಶ್ರತಳಿ ಕರುಗಳು ಪವನ್ ಅವರ್ತಿ, ದ್ವಿತೀಯ ಸುರೇಶ್ ಅವರ್ತಿ, ತೃತೀಯ ಕೆ.ಬಿ. ಪ್ರಕಾಶ್ ಕೂಡ್ಲೂರು, ಸಮಧಾನಕರ ದೀಕ್ಷಿತ್ ಗೌಡ, ಹಳ್ಳಿಕಾರ್ ಹಸುಗಳು ಪ್ರಥಮ ಮುತ್ತುರಾಜ್ ಸೂರೆಹಳ್ಳಿ, ದ್ವಿತೀಯ ರಾಜು ಹೆಬ್ಬಾಲೆ, ತೃತೀಯ ಸಂತೋಷ್, ಸಮಧಾನಕರ ಪ್ರಜ್ವಲ್ ಶಿರಂಗಾಲ,

ಶ್ವಾನ ಪ್ರದರ್ಶನ ಪ್ರಥಮ ಮಂಜುನಾಥ್ ಗುಂಡೂರಾವ್ ಕುಶಾಲನಗರ, ದ್ವಿತೀಯ ಮೋಹನ್ ಕುಮಾರ್ ಅವರ್ತಿ, ತೃತೀಯ ನವೀನ್ ಅವರ್ತಿ, ಮೇಕೆಗಳು ಪ್ರಥಮ ಎ.ಆರ್. ಮಹಾದೇವಪ್ಪ ಅವರ್ತಿ, ದ್ವಿತೀಯ ದಿಲೀಪ್ ತೆಲಗಿನಕೊಪ್ಪ, ತೃತೀಯ ಜಗದೀಶ್ ಅಂಬಲಾರೆ, ಕುರಿಗಳು ಪ್ರಥಮ ಶ್ರೀಧರ್ ತೆಲಗಿನಕೊಪ್ಪ, ದ್ವಿತೀಯ ಸುರೇಶ್ ತೆಲಗಿನಕೊಪ್ಪ, ತೃತೀಯ ಸಚಿನ್ ಚಪ್ಪರದಹಳ್ಳಿ ಬಹುಮಾನ ಗಳಿಸಿದ್ದಾರೆ.

ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್, ಕಾರ್ಯದರ್ಶಿ ಎಸ್.ಕೆ. ಶ್ರೀನಿವಾಸರಾವ್, ಎಂ.ಕೆ. ದಿನೇಶ್, ಅಮೃತ್‍ರಾಜ್ ಮತ್ತಿತರರು ಇದ್ದರು.