ಮಡಿಕೇರಿ, ನ. 22: ಕಡಗದಾಳು ಗ್ರಾಮದ ಬದರ್ ಜಮಾಅತ್‍ನ ಅಧೀನದಲ್ಲಿರುವ ನುಸ್ರತುಲ್ ಇಸ್ಲಾಂ ಸ್ವಲಾತ್ ಕಮಿಟಿಯ ಆಶ್ರಯದಲ್ಲಿ ತಾ. 28 ರಂದು ಸಂಜೆ 6.30 ಕ್ಕೆ ಸ್ವಲಾತ್ ವಾರ್ಷಿಕೋತ್ಸವ ಹಾಗೂ ದುಆಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ.
ಅಲ್ಲಿನ ಹಿದಾಯತುಲ್ ಇಸ್ಲಾಂ ಮದರಸ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದ ನೇತೃತ್ವವನ್ನು ಎಮ್ಮೆಮಾಡಿನ ಸೆಯ್ಯದ್ ಇಲ್ಯಾಸ್ ತಂಙಳ್ ವಹಿಸಲಿದ್ದು, ಜಮಾಅತ್‍ನ ಅಧ್ಯಕ್ಷ ಎಂ.ಎಸ್. ಯೂಸುಫ್ ಅವರ ಅಧ್ಯಕ್ಷತೆಯಲ್ಲಿ ಕಡಗದಾಳು ಮಸೀದಿಯ ಖತೀಬರಾದ ಇಬ್ರಾಹಿಂ ಮದನಿ ಅವರು ಕಾರ್ಯಕ್ರಮ ಉದ್ಘಾಟಿಸುವರು.
ಅತಿಥಿಗಳಾಗಿ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಎ. ಯಾಕೂಬ್, ಮಡಿಕೇರಿ ಬದ್ರಿಯಾ ಮಸೀದಿಯ ಧರ್ಮಗುರು ಡಿ.ಕೆ. ಉಮರ್ ಸಖಾಫಿ, ಎಂ.ಎಂ. ಮಸೀದಿ ಧರ್ಮಗುರು ಅಬ್ದುಲ್ ಹಮೀದ್ ಮದನಿ, ನೂರುದ್ದೀನ್ ಝಹರಿ, ಮುಸ್ತಫಾ ಸಖಾಫಿ, ಶಾದುಲಿ ಸಖಾಫಿ, ಮೊಹಮದ್ ಮದನಿ, ಅಶ್ರಫ್ ಎಂ.ಎಂ., ಬಶೀರ್ ಅಝಹರಿ, ಮೊಹಮ್ಮದಲಿ ಲತೀಫಿ, ಅಬ್ದುಲ್ ಫತ್ತಾಹ್ ಸಖಾಫಿ, ಅಬೂಬಕರ್ ಹಾಜಿ, ಜಹಫರ್ ಮುಸ್ಲಿಯಾರ್, ಪತ್ರಕರ್ತ ಎಂ.ಇ. ಮೊಹಮದ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ.