ಗೋಣಿಕೊಪ್ಪ ವರದಿ, ನ. 23: ಹಾತೂರು ಒಕ್ಕಲಿಗರ ಸಂಘದ ಆಶ್ರಯದಲ್ಲಿ ಸಂಘದ ಸದಸ್ಯರು ಹಾಗೂ ಕುಟುಂಬಸ್ಥರಿಗೆ ತಾ. 24 ರಂದು ಹಾತೂರು ಶಾಲಾ ಮೈದಾನದಲ್ಲಿ 4ನೇ ವಾರ್ಷಿಕ ಕ್ರೀಡಾಕೂಟ ನಡೆಯಲಿದೆ.

ಬೆಳಿಗ್ಗೆ 9 ಗಂಟೆಗೆ ಹಾತೂರು ಶಾಲಾ ಮೈದಾನದಲ್ಲಿ ವಿವಿಧ ವಿಭಾಗಗಳಲ್ಲಿ ಸ್ಫರ್ಧೆಗಳು ನಡೆಯಲಿದೆ. ಮಹಿಳೆಯರಿಗೆ ವಿಷದ ಚೆಂಡು, 100 ಮೀ. ಓಟ, ಭಾರದ ಗುಂಡು ಎಸೆತ, ಸೂಜಿಗೆ ದಾರ ಪೋಣಿಸಿ ಓಡುವದು, ಸಂಗೀತ ಕುರ್ಚಿ, ಬಾಂಬ್ ಇನ್ ಸಿಟಿ, ರಂಗೋಲಿ ಸ್ಪರ್ಧೆ, 50 ವರ್ಷ ಮೇಲ್ಪಟ್ಟವರಿಗೆ ವೇಗದ ನಡಿಗೆ, ಸ್ಪೂನ್‍ನಲ್ಲಿ ನಿಂಬೆ ಹಣ್ಣು ಇಟ್ಟು ಓಟ, ನಿಧಾನ ಬೈಕ್ ಹಾಗೂ ಸ್ಕೂಟರ್ ರೇಸ್, ಸಂಗೀತ ಸ್ಪರ್ಧೆ ಹಾಗೂ ಹಗ್ಗಜಗ್ಗಾಟ ನಡೆಯಲಿದೆ.

ಪುರುಷರಿಗೆ ವಿಷದ ಚೆಂಡು, 100 ಮೀ. ಓಟ, ಭಾರದ ಗುಂಡು ಎಸೆತ, ಸಂಗೀತ ಕುರ್ಚಿ, ಬಾಂಬ್ ಇನ್ ಸಿಟಿ, 50 ವರ್ಷ ಮೇಲ್ಪಟ್ಟವರಿಗೆ ವೇಗದ ನಡಿಗೆ, ನಿಧಾನ ಬೈಕ್ ಹಾಗೂ ಸ್ಕೂಟರ್ ರೇಸ್, ಸಂಗೀತ ಸ್ಪರ್ಧೆ ಮತ್ತು ಹಗ್ಗಜಗ್ಗಾಟ ಆಯೋಜಿಸಲಾಗಿದೆ.

ಇದರೊಂದಿಗೆ ಪ್ರಾಥಮಿಕ ಶಾಲಾ ಮಕ್ಕಳಿಗೆ, ಪ್ರೌಢ ಶಾಲಾ ಮಕ್ಕಳಿಗೆ ಹಾಗೂ ಪೂರ್ವ ಪ್ರಾಥಮಿಕ ಮಕ್ಕಳಿಗೆ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.