ಕೂಡಿಗೆ, ನ. 23 : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರದಿಂದ ಸೀಗೆಹೊಸೂರು ಸಂಪರ್ಕ ರಸ್ತೆಯಾಗಿರುವ ಬ್ಯಾಡಗೊಟ್ಟ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯ ವತಿಯಿಂದ ರೂ.60 ಲಕ್ಷ ಬಿಡುಗಡೆಯಾಗಿದೆ.

ಈ ರಸ್ತೆಯು ಸೋಮವಾರ ಪೇಟೆಗೆ ಹತ್ತಿರದ ರಸ್ತೆಯಾಗಿದ್ದು, ಬ್ಯಾಡಗೊಟ್ಟ, ಮದಲಾಪುರ, ಸೀಗೆಹೊಸೂರು ಹಾಗೂ ಸುತ್ತಮುತ್ತಲ ಗ್ರಾಮಗಳ ಸಂಪರ್ಕ ರಸ್ತೆಯಾಗಿದೆ. ಈ ರಸ್ತೆಯು ಹಾಳಾಗಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ ಬಹುಮುಖ್ಯ ಬೇಡಿಕೆಯಾಗಿದ್ದ ರಸ್ತೆ ಕಾಮಗಾರಿಗೆ ಇದೀಗ ಶಾಸಕರು ಸ್ಪಂದಿಸಿ, ಲೋಕೋಪಯೋಗಿ ಇಲಾಖೆಯ ವಿಶೇಷ ಅನುದಾನದ ರೂ.60 ಲಕ್ಷ ರೂಗಳು ಬಿಡುಗಡೆಗೊಂಡಿದ್ದು, ಶೀಘ್ರದಲ್ಲಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಪ್ರಾರಂಭವಾಗಲಿದೆ.