ಗುಡ್ಡೆಹೊಸೂರು, ನ. 22: ಇಲ್ಲಿನ ಸಮುದಾಯಭವನದಲ್ಲಿ ಸುಮಾರು 60 ಮಂದಿಗೆ ಕಿಟ್‍ನ್ನು ನೀಡಲಾಯಿತು. ಕಳೆದ ಮಳೆಗಾಲದಲ್ಲಿ ಕಾವೇರಿ ನದಿ ನೀರಿನಿಂದ ಉಂಟಾದ ಪ್ರವಾಹದಲ್ಲಿ ಸಂಕಷ್ಟದಲ್ಲಿದ್ದ ಕುಟುಂಬದವರಿಗೆ ವಿವಿಧ ಆಹಾರ ಪದಾರ್ಥಗಳ ಕಿಟ್‍ನ್ನು ನೀಡಲಾಯಿತು.

ಈ ಸಂದರ್ಭ ಎಲ್.ಐ.ಸಿ. ನೌಕರರ ಸಂಘದ ಮೈಸೂರು ವಿಭಾಗದ ಕಾರ್ಯದರ್ಶಿ ಎಸ್.ಎಸ್. ನಾಗರಾಜ್, ಸಂಘದ ಶ್ರೀಧರ್, ಎನ್.ಪಿ. ಉಮಾವತಿ, ಪಾರ್ವತಿ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಸುರೇಶ್ ಮುಂತಾದವರು ಹಾಜರಿದ್ದರು.

ಮಾದಪಟ್ಟಣ ಮತ್ತು ತೆಪ್ಪದ ಕಂಡಿ ಬಳಿ ಕುಟುಂಬದವರು ಕಿಟ್‍ನ್ನು ಪಡೆದರು. ಈ ಸಂದರ್ಭ ಗ್ರಾಮ ಪಂಚಾಯಿತಿಗೆ ಬಂದು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ ನೌಕರರ ಸಂಘದವರಿಗೆ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವತಿಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ಭಾರತಿ ಮತ್ತು ಪಿ.ಡಿ.ಓ ಶ್ಯಾಂ, ಸದಸ್ಯರಾದ ಪ್ರವೀಣ್, ಶಿವಪ್ಪ, ಕಾವೇರಪ್ಪ, ಭೀಮಯ್ಯ, ಪುಷ್ಪ, ಡಾಟಿ, ಪಾರ್ವತಿ ಮತ್ತು ಸದಸ್ಯರು ಹಾಜರಿದ್ದರು. ಬಸವನಹಳ್ಳಿಯ ನವಗ್ರಾಮದ 12 ಕುಟುಂಬದವರಿಗೂ ಈ ಸಂದರ್ಭ ಕಿಟ್‍ನ್ನು ನೀಡಲಾಯಿತು.