ಮಡಿಕೇರಿ, ನ. 23: ಇಲ್ಲಿನ ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಪ್ರಥಮ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯನ್ನು ತಾ. 26 ರಂದು ನಡೆಸಲು ನಿಗದಿಪಡಿಸಲಾಗಿತ್ತು. ಆದರೆ ನಾಮಪತ್ರ ವಾಪಸಾತಿ ಪ್ರಕ್ರಿಯೆ ಮುಗಿದ ನಂತರ ನಿರ್ದೇಶಕರುಗಳ ಆಯ್ಕೆ ಅವಿರೋಧವಾಗಿ ಆಗಿರುವದರಿಂದ; ಚುನಾವಣೆಯನ್ನು ರದ್ದುಪಡಿಸಲಾಗಿದೆ ಎಂದು ಸಂಘದ ಚುನಾವಣಾಧಿಕಾರಿ, ಸಹಕಾರ ಅಭಿವೃದ್ಧಿ ಅಧಿಕಾರಿ ಸಿ.ಕೆ. ಭವಾನಿ ತಿಳಿಸಿದ್ದಾರೆ.