ಹೊದ್ದೂರು, ನ. 21: ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ ಇವುಗಳ ಆಶ್ರಯದಲ್ಲಿ 18 ವರ್ಷದ ರಾಜ್ಯಮಟ್ಟದ ಕಲಾ ಕುಂಚ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಫರ್ಧೆಯು ಪ್ರಾಥಮಿಕ, ಪ್ರೌಢ ಶಾಲೆ, ಕಾಲೇಜು ಮತ್ತು ಸಾರ್ವಜನಿಕ ಎಂಬ ವಿಭಾಗಗಳಲ್ಲಿ ನಡೆಯಲಿದೆ. ವಿಷಯ: ಸಮುದ್ರ ಕಿನಾರೆ. 20 ಬೈ 4 ಸೆಂಟಿಮೀಟರ್ ಗಾತ್ರದ ಡ್ರಾಯಿಂಗ್ ಶೀಟ್ ಅಥವಾ ಅಂಚೆ ಕಾರ್ಡ್‍ನಲ್ಲಿ ಪೆನ್ಸಿಲ್, ಇಂಡಿಯನ್ ಇಂಕ್, ಜಲವರ್ಣಗಳಲ್ಲಿ ಯಾವದಾದರೂ ಒಂದನ್ನು ಬಳಸಿ ಚಿತ್ರ ಬಿಡಿಸಿ, ಕಳುಹಿಸಬಹುದಾಗಿದೆ.
ಶಾಲಾ ಕಾಲೇಜು ವಿಭಾಗದವರು ಶಾಲಾ ಕಾಲೇಜುಗಳ ಮುದ್ರೆ, ಮತ್ತು ಮುಖ್ಯಸ್ಥರ ಸಹಿಗಳೊಂದಿಗೆ ಡಿಸೆಂಬರ್ 31 ರೊಳಗಾಗಿ ಚಿತ್ರವನ್ನು ಕಳುಹಿಸಬಹುದಾಗಿದೆ. ವಿಜೇತರಿಗೆ ನಗದು ಬಹುಮಾನ ಮತ್ತು ಸ್ಮರಣಿಕೆಗಳೊಂದಿಗೆ ಸನ್ಮಾನಿಸಲಾಗುವದು. ಚಿತ್ರಗಳನ್ನು ಕಳುಹಿಸಬೇಕಾದ ವಿಳಾಸ: ನಿರ್ದೇಶಕರು, ಅಂಚೆ ಕುಂಚ ವಿಭಾಗ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ, 574216. ಅಧಿಕ ಮಾಹಿತಿಗಾಗಿ ಮೊಬೈಲ್ 9740139308, 9480146703 ಅನ್ನು ಸಂಪರ್ಕಿಸಬಹುದು.