ಗೋಣಿಕೊಪ್ಪ ವರದಿ, ನ. 21: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಟಿ.ಎಸ್. ಹರೀಶ್ ಅವರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿದೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಅರಣ್ಯ ಮತ್ತು ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಸಿ. ನಾಗರಾಜಯ್ಯ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿಜ್ಞಾನಿ ಡಾ. ಜಿ.ಎಂ. ದೇವಗಿರಿ ಮಾರ್ಗದರ್ಶನದಲ್ಲಿ ಕೊಡಗಿನ ವಿವಿಧ ಮರ ಆಧಾರಿತ ಭೂಬಳಕೆ ವ್ಯವಸ್ಥೆಯಲ್ಲಿ ಜೀವರಾಶಿ ಮತ್ತು ಇಂಗಾಲದ ದಾಸ್ತಾನಿನ ಬಗ್ಗೆ ಅವರು ಅಧ್ಯಯನ ನಡೆಸಿದ್ದರು. ಇದಕ್ಕೆ ಪಿಹೆಚ್‍ಡಿ ಪದವಿ ನೀಡಲಾಗಿದೆ.