ಸೋಮವಾರಪೇಟೆ, ನ. 21: ಸಮುದಾಯದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವದರೊಂದಿಗೆ ಜನಾಂಗದ ಸಂಸ್ಕøತಿ, ಕಲೆ, ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಜಿಲ್ಲೆಯ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದೇವಜನ ದಯಾನಂದ್ ಅಭಿಪ್ರಾಯಿಸಿದರು.
ಅರೆಭಾಷೆ ಗೌಡ ಸಮಾಜದ ವತಿಯಿಂದ ಸಮೀಪದ ಚೌಡ್ಲು ಸಾಂದೀಪÀನಿ ವಿದ್ಯಾಸಂಸ್ಥೆಯಲ್ಲಿ ನಡೆದ ‘’ನಮ್ಮವರ ಸಂತೋಷಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದರೆ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಬಹುದು. ಜನಾಂಗದಲ್ಲಿ ಪ್ರತಿಯೋರ್ವ ವಿದ್ಯಾರ್ಥಿಯು ಶೈಕ್ಷಣಿಕÀ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವÀ ಮೂಲಕ ಉತ್ತಮ ಅಂಕಗಳಿಸುವದರೊಂದಿಗೆ ಉದ್ಯೋಗ ಪಡೆಯಲು ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಮಾಜದ ಅಧ್ಯಕ್ಷ ಸೂದನ ಸೋಮಣ್ಣ ಮಾತನಾಡಿ, ಜನಾಂಗ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರೆ ಮಾತ್ರ ಒಗ್ಗಟ್ಟು ಬೆಳೆಯಲು ಸಾಧ್ಯ ಮತ್ತು ಸಂಘಟ ನಾತ್ಮಕವಾಗಿ ಹಲವು ಕಾರ್ಯಕ್ರಮ ಗಳನ್ನು ನಡೆಸಲು ಸಾಧ್ಯ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ವೇದಿಕೆಯಲ್ಲಿ ಸಾಂದೀಪನಿ ಶಾಲೆಯ ಮುಖ್ಯಸ್ಥರಾದ ಮೂಡಗದ್ದೆ ಲಿಖಿತ್ ದಾಮೋದರ್, ಉಪಾಧ್ಯಕ್ಷ ಮುಕ್ಕಾಟಿ ಚಂಗಪ್ಪ, ಕಾರ್ಯದರ್ಶಿ ದಂಡಿನ ಉತ್ತಯ್ಯ, ಖಜಾಂಚಿ ಕುದುಕುಳಿ ಗಜೇಂದ್ರ ಮತ್ತು ಸಮಿತಿ ಸದ್ಯಸರು ಉಪಸ್ಥಿತರಿದ್ದರು.