ಗೋಣಿಕೊಪ್ಪಲು, ನ.21: ಕೋತೂರು ಗ್ರಾಮದ ಶ್ರೀಕೃಷ್ಣ ಅಮ್ಮಕೊಡವ ಸಮಾಜದ ನೂತನ ಅಧ್ಯಕ್ಷರಾಗಿ ಹೆಮ್ಮಚ್ಚಿಮನೆ ಧನು ಆಯ್ಕೆಗೊಂಡಿದ್ದಾರೆ. ಇತ್ತೀಚೆಗೆ ಸಮಾಜದ ಸಭಾಂಗಣದಲ್ಲಿ ನಡೆದ 8ನೇ ವರ್ಷದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಸಮಾಜದ ಗೌರವ ಅಧ್ಯಕ್ಷರಾಗಿ ಮನ್ನಕ್ಕಮನೆ ಕಿರಣ್ ಆಯ್ಕೆಯಾಗಿದ್ದಾರೆ. ನಿರ್ಗಮಿತ ಅಧ್ಯಕ್ಷ ಮನ್ನಕ್ಕಮನೆ ರಾಜು ಅಯ್ಯಪ್ಪಮಯ್ಯ, ಕಾರ್ಯದರ್ಶಿ ಹೆಮ್ಮಚ್ಚಿಮನೆ ಅಸಿತ ಹಾಗೂ ಸದಸ್ಯರು ಉಪಸ್ಥಿತರಿದ್ದರು.