ಬೆಂಗಳೂರು, ನ. 21: ಅಕ್ರಮ- ಸಕ್ರಮ ಸಮಿತಿಯಿಂದ ಮಂಜೂ ರಾಗಿದ್ದ ಜಾಗವನ್ನು ಬಳಿಕ ಜಿಲ್ಲೆಯ ಅಧಿಕಾರಿಗಳು ರದ್ದುಗೊಳಿಸಿದ್ದÀರು. ಇದೀಗ ರಾಜ್ಯ ಉಚ್ಚ ನ್ಯಾಯಾಲಯವು ಮನವಿಯೊಂದರ ವಿಚಾರಣೆ ಬಳಿಕ ಈ ಹಿಂದೆ ಮಂಜೂರಾಗಿದ್ದ ಜಾಗಗಳ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದು ಕೊಳ್ಳುವಂತೆ ಜಿಲ್ಲಾಧಿಕಾರಿಯವರಿಗೆ ಆದೇಶಿಸಿದ್ದು ವಿಚಾರಣೆಯನ್ನು ಮುಂದುವರಿಸಿದೆ.2008-10 ರಲ್ಲಿ ಕೊಡಗಿನ ಅನೇಕ ಮಂದಿ ಕೃಷಿಕರಿಗೆ ಜಿಲ್ಲೆಯ ಶಾಸಕರುಗಳು ಅಧ್ಯಕ್ಷರಾಗಿರುವ, ತಹಶೀಲ್ದಾರರುಗಳು ಸದಸ್ಯ ಕಾರ್ಯದರ್ಶಿಯಾಗಿರುವ ಅಕ್ರಮ- ಸಕ್ರಮ ಸಮಿತಿಯಿಂದ ಸೂಕ್ತ ಜಾಗ ಮಂಜೂರಾಗಿತ್ತು. ಆನಂತರ ಬಂದ ಹೊಸ ಸರಕಾರದಲ್ಲಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರು ಹಿಂದಿನ ಸರಕಾರದ ಆಡಳಿತಾವಧಿಯಲ್ಲಿ ಅಕ್ರಮ- ಸಕ್ರಮದಡಿ ರಾಜ್ಯದಲ್ಲಿ ಮಂಜೂ ರಾಗಿದ್ದ ಎಲ್ಲ ಜಾಗಗಳನ್ನು ರದ್ದುಗೊಳಿ ಸುವಂತೆ ಮೌಖಿಕ ಆದೇಶ ನೀಡಿದ್ದರು. ಆದರೆ, ಕಾನೂನಾ ತ್ಮಕವಾಗಿ ಅದನ್ನು ಜಾರಿಗೊಳಿಸಿರಲಿಲ್ಲ. ಸಚಿವರ ಮೌಖಿಕ ಆದೇಶವನ್ನೇ ಆಧಾರವಾಗಿರಿಸಿ ಆಗಿನ ಕೊಡಗು ಜಿಲ್ಲಾ ಉ¥ (ಮೊದಲ ಪುಟದಿಂದ) À ವಿಭಾಗಾಧಿಕಾರಿ ಅಭಿರಾಂ ಜಿ. ಶಂಕರ್

ಅವರು ಸ್ವಯಂ ಪ್ರೇರಣಾ ದೂರಿನ ಮೂಲಕ ಜಿಲ್ಲೆಯಲ್ಲಿ ಅಕ್ರಮ-ಸಕ್ರಮ ಸಮಿತಿಯಿಂದ ಮಂಜೂರಾದ ಅನೇಕ ಜಾಗಗಳ ಹಕ್ಕನ್ನು ರದ್ದುಗೊಳಿಸಿದ್ದರು. ಇದರ ವಿರುದ್ಧ ವೀರಾಜಪೇಟೆ ನಾಂಗಾಲ ಗ್ರ್ರಾಮದ ಸಿ.ಸಿ. ಕುಟ್ಟಪ್ಪ ಮತ್ತಿತರರು ಜಿಲ್ಲಾಧಿಕಾರಿಯವರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲ್ಲಿಸಿದ್ದರು. ಈಗಿನ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಈ ಹಿಂದಿನ ಉಪವಿಭಾಗಾಧಿಕಾರಿಯವರ ಆದೇಶವನ್ನೇ ಪುಷ್ಟೀಕರಿಸಿ ಮಂಜೂರಾತಿ ರದ್ದತಿಯನ್ನು ಸಮರ್ಥಿಸಿದ್ದರು.

ಈ ಆದೇಶದ ವಿರುದ್ಧ ಸಿ.ಸಿ. ಕುಟ್ಟಪ್ಪ ಮತ್ತಿತರರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಜಿಲ್ಲಾಧಿಕಾರಿ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ಕೋರಿ ಬೆಂಗಳೂರಿನ ವಕೀಲರಾದ ಪವನ್‍ಚಂದ್ರ ಶೆಟ್ಟಿ ಅವರ ಮೂಲಕ ಮನವಿ ಸಲ್ಲ್ಲಿಸಿದ್ದರು. ಇಂದು ನ್ಯಾಯಾಧೀಶರಾದÀ ದಿನೇಶ್‍ಕುಮಾರ್ ಅವರು ಆದೇಶ ಹೊರಡಿಸಿ ಒಮ್ಮೆ ಅಕ್ರಮ -ಸಕ್ರಮ ಸಮಿತಿ ಮಂಜೂರು ಮಾಡಿದ ಜಾಗವನ್ನು ಅಧಿಕಾರಿಗಳು ರದ್ದುಗೊಳಿಸುವಂತಿಲ್ಲ. ರೈತರಿಗೆ ತೊಂದರೆಯುಂಟಾಗುವದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಗೊಳಿಸಿದರು. ಈ ಸಂಬಂಧ ರಾಜ್ಯ ಕಂದಾಯ ಕಾರ್ಯದರ್ಶಿ, ಕೊಡಗು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ವೀರಾಜಪೇಟೆ ತಹಶೀಲ್ದಾರ್ ಇವರುಗಳು ಮುಂದಿನ ನಾಲ್ಕು ವಾರಗಳ ಒಳಗೆ ಸೂಕ್ತ ಉತ್ತರ ನೀಡುವಂತೆ ಸೂಚಿಸಿದ್ದಾರೆ. ಅಲ್ಲಿವರೆಗೆ ಮಂಜೂರಾತಿ ಪ್ರಕ್ರಿಯೆ ಯಥಾ ಸ್ಥಿತಿಯಲ್ಲಿ ಮುಂದುವರಿಯುವಂತೆ ಆದೇಶಿಸಿದ್ದಾರೆ.