ಮಡಿಕೇರಿ, ನ. 21: ಕಳೆದ 30 ವರ್ಷಗಳಿಂದ ವೃತ್ತಿಯ ಜೊತೆಗೆ ಪ್ರವೃತ್ತಿಯಾಗಿ ಸಮಾಜ ಸೇವೆ ಮಾಡಿಕೊಂಡು ಬಂದಿರುವ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರ ಅವರಿಗೆ ಈ ಸಲದ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ ದೊರೆತಿದೆ.
ಈವರೆಗೆ ಸುಮಾರು 3.50 ಲಕ್ಷಕ್ಕೂ ಮಿಕ್ಕಿ ಶಿಬಿರಾರ್ಥಿಗಳನ್ನು ಉಚಿತವಾಗಿ ರಾಜ್ಯಾದ್ಯಂತ ಬ್ಯಾಂಕಿಂಗ್ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಿದ್ದು, 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬದುಕನ್ನ ಕಟ್ಟಿಕೊಂಡಿದ್ದಾರೆ. ಕಳೆದ ಎಂಟು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಯ ಅಂಕಣಕಾರರಾಗಿ ಹಾಗೂ ಮಾನವೀಯ ಸಂಬಂಧ ಪರೀಕ್ಷೆ ಒಂದು ಹಬ್ಬ ಮತ್ತು ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ನಂತರ ಮುಂದೇನು ಇವರ ಬಹು ಜನಪ್ರಿಯ ಕಾರ್ಯಕ್ರಮವಾಗಿದೆ.
ಈ ಹಿನ್ನೆಲೆ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕøತಿಕ ಪರಿಷತ್ ವತಿಯಿಂದ ತಾ. 24 ರಂದು ಮೈಸೂರಿನಲ್ಲಿ ಸನ್ಮಾನ ನಡೆಯಲಿದೆ. ಈ ಪ್ರಶಸ್ತಿ ಪಡೆದ ಮೊದಲ ಬ್ಯಾಂಕರ್ ಕೂಡಾ ಇವರಾಗಿದ್ದಾರೆ. ಪ್ರಸ್ತುತ ಜಿಲ್ಲಾ ಅಗ್ರಣಿ (ಲೀಡ್) ಬ್ಯಾಂಕ್ ಮಡಿಕೇರಿಯಲ್ಲಿ ಜಿಲ್ಲಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.