ಮನು ಮುತ್ತಪ್ಪ

ನಾಪೆÉÇೀಕ್ಲು, ನ. 21: ಕೊಡವ ಸಮಾಜ ಅಭಿವೃದ್ಧಿಯಾಗಬೇಕಾದರೆ ಎಲ್ಲಾ ಸದಸ್ಯರ ಸಹಕಾರ ಅಗತ್ಯ. ಆದುದರಿಂದ ಎಲ್ಲರೂ ಮುಕ್ತ ಮನಸ್ಸಿನಿಂದ ಸಹಕಾರ ನೀಡಬೇಕು ಎಂದು ನಾಪೆÉÇೀಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹೇಳಿದರು.

ಕೊಡವ ಸಮಾಜದ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊಡವ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾಪೆÇೀಕ್ಲು ಕೊಡವ ಸಮಾಜದ ವತಿಯಿಂದ ಅಂತರ ಗ್ರಾಮ ಸಾಂಸ್ಕøತಿಕ ಸ್ಪರ್ಧೆಯನ್ನು ಡಿ. 24, 25ರಂದು ನಡೆಸಲು ಉದ್ದೇಶಿಸಲಾಗಿದೆ. ಪ್ರತೀ ವರ್ಷ ಇದೇ ದಿನಾಂಕದಂದು ಈ ಸ್ಪರ್ಧೆಯನ್ನು ನಡೆಸಲಾಗುವದು. ಎಲ್ಲರೂ ಈ ಸಾಂಸ್ಕøತಿಕ ಹಬ್ಬದಲ್ಲಿ ಪಾಲ್ಗೊಳ್ಳುವದರ ಮೂಲಕ ಕೊಡವ ಸಂಸ್ಕøತಿಯ ಏಳಿಗೆಗೆ ಸಹಕರಿಸಬೇಕು ಎಂದರು. ಈ ಹಿಂದೆ ಕೊಡವ ಸಮಾಜದ ಆಡಳಿತ ಮಂಡಳಿಯು ಮದುವೆ ಸಂದರ್ಭದಲ್ಲಿ ನೀರ್‍ಚಾಣ (ಗಂಗಾಪೂಜೆ) ಸಂದರ್ಭ ಮದ್ಯ ನಿಷೇಧಿಸಲು ತೀರ್ಮಾನಿಸಿತು. ಇದಕ್ಕೆ ಮಹಾಸಭೆಯಲ್ಲಿ ಒಮ್ಮತದ ನಿರ್ಣಯ ವ್ಯಕ್ತವಾಗಿದೆ ಎಂದರು.

ಸಭೆಯಲ್ಲಿ ಕೊಡವ ಸಮಾಜದ ಸ್ಥಾಪಕ ಅಧ್ಯಕ್ಷ ಮಣವಟ್ಟಿರ ಬಿ. ಮಾಚಯ್ಯ, ಮಾಜಿ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಖಜಾಂಚಿ ಅಪ್ಪಾರಂಡ ಸುಧೀರ್ ಅಯ್ಯಪ್ಪ, ನಿರ್ದೇಶಕರು, ಪದಾಧಿಕಾರಿಗಳು ಇದ್ದರು.

ಅಪ್ಪಾರಂಡ ನಂದಿನಿ ಪ್ರಾರ್ಥನೆ, ಉಪಾಧ್ಯಕ್ಷ ಮಾಳೆಯಂಡ ಅಯ್ಯಪ್ಪ ಸ್ವಾಗತಿಸಿ, ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ವಂದಿಸಿದರು.