ಮಡಿಕೇರಿ, ನ. 21: ವಾರಣಾಸಿಯಲ್ಲಿ ನಡೆದ 17 ವರ್ಷ ವಯೋಮಿತಿಯೊಳಗಿನ ಸಿಬಿಎಸ್‍ಇ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ತಂಡ ಗೆಲುವು ಸಾಧಿಸಿದ್ದು, ಬಾಲಕರ ತಂಡದ ನಾಯಕ ಸಿ.ಪಿ. ಲಿವಿನ್ ಪೆಮ್ಮಯ್ಯ ಉತ್ತಮ ಹಿನ್ನಡೆ ಆಟಗಾರ ಹಾಗೂ ಬಾಲಕಿಯರ ತಂಡದ ತೇಜಸ್ವಿ ದೇವಯ್ಯ ಉತ್ತಮ ಹಾಫ್ ಬ್ಯಾಕ್ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.