ಮಡಿಕೇರಿ, ನ. 20: ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಬೀದಿ ನಾಯಿಗಳ ಉಪಟಳವನ್ನು ನಿಯಂತ್ರಿಸುವ ಸಲುವಾಗಿ ಅನಿಮಲ್ ರಿಲೀಫ್ ಫಂಡ್ (ಎಆರ್‍ಕೆ) ಕಟಿಬದ್ಧ ವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸಾ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿರುವದಾಗಿ ಸಂಘÀಟನೆಯ ಸ್ಥಾಪಕ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ಟ್ರಸ್ಟಿಯಾದ ಲೈಲ ಆಳ್ವಾರಿಸ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಆರ್‍ಕೆ ಸಂಘÀಟನೆಯು ಬೆಂಗಳೂರಿನ ಅನಿಮಲ್ ವೆಲ್‍ಫೇರ್ ಆರ್ಗನೈಸೇಷನ್ ಸಹಯೋಗದಲ್ಲಿ ನಾಯಿಗಳ ಸಂತಾನ ಹರಣ ಮತ್ತು ರ್ಯಾಬಿಸ್ ನಿರೋಧಕ ಚುಚ್ಚುಮದ್ದಿನ ಶಿಬಿರವನ್ನು ನಡೆಸಿಕೊಂಡು ಬರುತ್ತಿದೆ. ಕಳೆದ ಎರಡು ವರ್ಷಗಳ ಕಾಲ ಜಿಲ್ಲೆಯಲ್ಲಿ ಮುಂಗಾರಿನ ಭಾರೀ ಮಳೆ ಮತ್ತು ಪ್ರಾಕೃತಿಕ ವಿಕೋಪ ಸಂಭವಿಸಿರುವದರಿಂದ ಶಿಬಿರವನ್ನು ನಡೆಸಲು ಸಾಧ್ಯವಾಗಿರಲಿಲ್ಲವೆಂದು ತಿಳಿಸಿದರು.
ಈ ಬಾರಿ ಮಡಿಕೇರಿಗೆ ಸಮೀಪದ ಕಡಗದಾಳು ಗ್ರಾಮದಲ್ಲಿ ಗ್ರಾಮ ಪಂಚಾಯ್ತಿಗೆ ಅನುಮತಿ ಯೊಂದಿಗೆ ತಾ. 16 ಮತ್ತು 17 ರಂದು ಎರಡು ದಿನಗಳ ಕಾಲ ವಾರ್ಷಿಕ 6ನೇ ಶಿಬಿರವನ್ನು ನಡೆಸುವ ಮೂಲಕ ಒಟ್ಟು 52 ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗಿದೆ. ನಮ್ಮ ಸಂಸ್ಥೆಯೊಂದಿಗೆ ಕೈಜೋಡಿಸಿರುವ ಬೆಂಗಳೂರಿನ ಡಾ. ಚೇತನ್ ಅವರು ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನು ನಡೆಸಿಕೊಟ್ಟಿದ್ದು, ಇವರಿಗೆ ನುರಿತ ಪ್ಯಾರಾ ವೆಟರ್ನರಿಗಳಾದ ವಿಕಾಸ್ ಮತ್ತು ಅರವಿಂದ್, ಅನಿಮಲ್ ವೆಲ್‍ಫೇರ್ ಆರ್ಗನೈಸೇಷನ್‍ನ ಟ್ರಸ್ಟಿ ನವೀನ್ ಸಹಕಾರವನ್ನು ನೀಡಿದ್ದಾರೆಂದು ಮಾಹಿತಿ ನೀಡಿದರು.
ಇದೊಂದು ಅತ್ಯಂತ ಕಡಿಮೆ ಅವಧಿಯ ಮತ್ತು ಅತ್ಯಂತ ಸರಳವಾದ ಶಸ್ತ್ರ ಚಿಕಿತ್ಸೆಯಾಗಿದೆ. ಇದರಲ್ಲಿ ನಾಯಿಯ ದೇಹದಲ್ಲಿ ಸಣ್ಣ ರಂಧ್ರವನ್ನು ಮಾಡಿ ಅದರ ಮೂಲಕ ಶಸ್ತ್ರ ಚಿಕಿತ್ಸೆ ನಿರ್ವಹಿಸಲಾಗುತ್ತದೆ ಮತ್ತು ಕೆಲವೇ ಗಂಟೆಗಳ ಅವಧಿಯಲ್ಲಿ ಅವುಗಳನ್ನು ಅವುಗಳಿರುವ ಸ್ಥಳದಲ್ಲೆ ಬಿಡಲಾಗುತ್ತದೆಂದು ಮಾಹಿತಿ ನೀಡಿದರು. ನಾವು ಆಯೋಜಿಸುತ್ತಿರುವ ಶಿಬಿರದಲ್ಲಿ ಪ್ರಮುಖವಾಗಿ ಬೀದಿ ನಾಯಿಗಳನ್ನು ಯಾರೇ ಸಾರ್ವಜನಿಕರು ಹಿಡಿದು ತಂದಲ್ಲಿ ಉಚಿತವಾಗಿ ಅವುಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಿರ್ವಹಿಸ ಲಾಗುತ್ತದೆ. ಖಾಸಗಿಯವರು ತಮ್ಮ ಸಾಕು ನಾಯಿಗಳನ್ನು ಕರೆ ತಂದಲ್ಲಿ ನಿಗದಿತ ಶುಲ್ಕವನ್ನು ನೀಡಬೇಕಾಗುತ್ತದೆಂದು ಲೈಲಾ ಆಳ್ವರಿಸ್ ತಿಳಿಸಿದರು.
ಸಿಎಂಸಿ ನೆರವಿನೊಂದಿಗೆ ಶಿಬಿರ: ಮುಂದಿನ 2020ನೇ ಸಾಲಿನ ಏಪ್ರಿಲ್-ಮೇ ತಿಂಗಳಿನಲ್ಲಿ ಮಡಿಕೇರಿಯಲ್ಲಿ ವಾರ್ಷಿಕ ಶಿಬಿರವನ್ನು ನಡೆಸಲು ಉದ್ದೇಶಿಸಲಾಗಿದೆ. ದೊಡ್ಡ ಮಟ್ಟದ ಆ ಶಿಬಿರ ಐದರಿಂದ ಆರು ದಿನಗಳ ಅವಧಿಯದ್ದಾಗಿರುತ್ತದೆ. ಮಡಿಕೆÉೀರಿ ನಗರಸಭೆಯ ಸಹಕಾರದೊಂದಿಗೆ ನಡೆಯುವ ಶಿಬಿರದಲ್ಲಿ ಎರಡರಿಂದ ಮೂರು ಮಂದಿ ಪಶು ವೈದ್ಯರು ಪಾಲ್ಗೊಳ್ಳುವದರೊಂದಿಗೆ, ಸುಮಾರು ಆರು ಮಂದಿ ನಾಯಿಗಳನ್ನು ಹಿಡಿಯುವ ಪರಿಣತರನ್ನು ಬಳಸಿಕೊಳ್ಳಲಾಗುತ್ತದೆ. ಇಂತಹ ಶಿಬಿರದಲ್ಲಿ ಪ್ರತಿ ನಾಯಿಯ ಶಸ್ತ್ರ ಚಿಕಿತ್ಸೆಗೆ ಸರಿ ಸುಮಾರು 1200 ರೂ. ವೆಚ್ಚ ತಗಲುತ್ತದಾದರೆ, ನಗರಸಭೆ ನಮಗೆ 900 ರೂ. ನೆರವನ್ನು ನೀಡುತ್ತದೆ. ಉಳಿದ ಮೊತ್ತವನ್ನು ಸಂಘÀಟನೆಯೆ ಭರಿಸಲಿದೆ. ಪಂಚಾಯ್ತಿಗಳು ಮತ್ತಷ್ಟು ನೆರವನ್ನು ನೀಡಿದಲ್ಲಿ ಶಿಬಿರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡುವ ಮೂಲಕ ಬೀದಿನಾಯಿಗಳನ್ನು ನಿಯಂತ್ರಿಸಲು ಸಾಧ್ಯವಾಗಬಲ್ಲದು ಎನ್ನುವ ಆಶಯವನ್ನು ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಸಂಘÀಟನೆಯ ಖಜಾಂಚಿ ಕಾವೇರಿ ಮುತ್ತಣ್ಣ ಉಪಸ್ಥಿತರಿದ್ದರು.